ಸಿರಿಗೆರೆ:- ಅಧ್ಯಕ್ಷ ಸ್ಥಾನ ಅಧಿಕಾರವಲ್ಲ, ಹೊಣೆಗಾರಿಕೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದರು.
ನನಗೆ ದೊರೆತಿರುವ ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರವಲ್ಲ. ಅದು ಹೊಣೆಗಾರಿಕೆ. ರಾಜ್ಯದ ಎಲ್ಲ ಹಿರಿಯರ ಮಾರ್ಗದರ್ಶನದಿಂದ ಅದನ್ನು ನಿಭಾಯಿಸುವೆ’ ಎಂದರು.
ಹಾದಿಯಲ್ಲಿ ಕಲ್ಲುಮುಳ್ಳುಗಳೂ ಇವೆ. ಹಿರಿಯರ ಮಾರ್ಗದರ್ಶನದಲ್ಲಿ ಅವುಗಳನ್ನು ದಾಟಿಕೊಂಡು ಮುನ್ನಡೆಯುತ್ತೇನೆ. ಶಿಕಾರಿಪುರ ಕ್ಷೇತ್ರದ ಜನರು ಶಾಸನಸಭೆಗೆ ನನ್ನನ್ನು ಆಯ್ಕೆ ಮಾಡಿದ್ದರಿಂದ ಈ ಹೊಣೆಗಾರಿಕೆ ಸಂದಿದೆ’ ಎಂದರು.
‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಮಾತಿನಲ್ಲಿ ನಮ್ಮ ತಂದೆಗೆ ಅಪಾರ ವಿಶ್ವಾಸ. ಹಾಗಾಗಿಯೇ ಅವರು ಧರ್ಮಪೀಠಗಳಿಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ, ನಾಯಕ ಎಂಬ ಎಲ್ಲ ಬಿಗುಮಾನ ತೊರೆದು ವಿನೀತಭಾವದಿಂದ ಇರುತ್ತಿದ್ದರು. ಮಠದ ಶಿಷ್ಯನಾಗಿ ನಾನೂ ಸಹ ಅವರದೇ ದಾರಿಯಲ್ಲಿ ಹೆಜ್ಜೆ ಹಾಕುತ್ತೇನೆ. ಆ ಕೆಲಸದಲ್ಲಿ ತರಳಬಾಳು ಶ್ರೀಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಕೋರುತ್ತೇನೆ’ ಎಂದು ಹೇಳಿದರು.
‘ನನ್ನಿಂದ ತಪ್ಪುಗಳೇನಾದರೂ ಆದರೆ ಶ್ರೀಗಳು ಮಾರ್ಗದರ್ಶನ ಮಾಡಬೇಕು’ ಎಂದು ಮನವಿ ಮಾಡಿದರು.