ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ವತಿಯಿಂದ ಅಹಿಂದ ನಾಯಕರನ್ನು ಉಳಿಸಿ ಎಂಬ ಜಾಥಾ ನಾಳೆ ಹಮ್ಮಿಕೊಳ್ಳಲಾಗಿದ್ದು ಈ ಕುರಿತು ನಗರದಲ್ಲಿಂದು ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು.
ರೈತರ ಭೂಮಿಯನ್ನು ಕಿತ್ತುಕೊಂಡ ಕಾಂಗ್ರೆಸ್: ಹರ್ಯಾಣದಲ್ಲಿ ರಾಜನಾಥ್ ಸಿಂಗ್ ಕಿಡಿ!
ಅಹಿಂದ ಸಂಘಟನೆ ಅಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ನಂತರ ಮಾತನಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು, ಅಂತಹ ನಾಯಕರ ಮೇಲೆ ಸಂಕಷ್ಟ ತರುವಂತಹ ಕಾರ್ಯವನ್ನು ಬಿಜೆಪಿ ಮಾಡಿದ್ದು, ಒಬ್ಬ ಅಲ್ಪಸಂಖ್ಯಾತ ಹಿಂದುಗಳ ವರ್ಗಗಳ ನಾಯಕ ಅವರ ಆಡಳಿತ ಸಹಿಸದ ಭಾರತೀಯ ಜನತಾ ಪಕ್ಷದವರು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಹುನ್ನಾರ ನಡೆಸಿದ್ದು ಈ ಕುರಿತು ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಬಳಿಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ಬಳಿಯ ಡಾ .ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ಬಯ್ಯಾ ಪ್ರಸಾದ್ ಹಾಗೂ ನಾಡಿನ ಅನೇಕ ಮಠಾಧೀಶರರು ಚಾಲನೆ ಕೊಡುವರು.
ಡಾ. ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪನೆ ಮಾಡಿದ ನಂತರ ಜಾಗೃತಿ ಭಾಷಣ ನಡೆಯಲಿದೆ ಕುಂದಗೋಳ ಮೂಲಕ ಬೆಂಗಳೂರಿನ ವಿಧಾನಸೌಧಕ್ಕೆ ಸಾಗಲಾಗುವುದು ಎಂದರು. 136 ಶಾಸಕರು ಸೇರಿದಂತೆ, ಸಿದ್ದರಾಮಯ್ಯ ಅಭಿಮಾನಿಗಳು, ದಲಿತ ಸಂಘಟನೆಗಳು ಸೇರಿದಂತೆ ಎಲ್ಲರೂ ನೈತಿಕ ಬೆಂಬಲ ನೀಡುತ್ತಿದ್ದು, ಜಾಥಾದಲ್ಲಿ ಸಾವಿರಾರು ಜನರು ಭಾಗಿಯಾಗಲಿದ್ದಾರೆ ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಬೆಂಬಲವಾಗಿ ನಾವಿದ್ದು, ಸಿಎಂ ಅವರು ರಾಜೀನಾಮೆ ನೀಡದೆ ಆಡಳಿತ ಮುಂದುವರೆಸಬೇಕು ಎಂದರು.
ಇದೇ ವೇಳೆ ಅಹಿಂದ ರಾಜ್ಯ ವಕ್ತಾರ ಬಾಬಾಜಾನ್ ಮುಧೋಳ ಮಾತನಾಡಿ ,ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಒಬ್ಬ ಹಿರಿಯ ನಾಯಕ ಅಭಿವೃದ್ಧಿ ಹರಿಕಾರ ಯಾವುದೇ ಜಾತಿ ಮತ ಪಂಥ ಎನ್ನದೇ ನಾಡಿನ ಹಿಂದುಗಳಿದ ವರ್ಗಗಳ ನಾಯಕರಾದರು.ಅವರ ಶ್ರೇಯಸ್ಸು ಸಹಿಸದ ಕೆಲವರು ತೊಂದರೆ ಕೊಡತಾ ಇದ್ದಾರೆ ಅಮಿತಾ ಶಾ, ನರೇಂದ್ರ ಮೋದಿ ಅವರ ಪಿತೂರಿ ನಡೆಯಲ್ಲ. ಅದಕ್ಕಾಎ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಜಾಥಾ ಆರಂಭಗೊಂಡು ವಿವಿಧ ತಾಲ್ಲೂಕು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಿದ್ಧರಾಮಯ್ಯಾ ನವರ ವಿರುದ್ಧ ನಡೆಸಿರುವ ಪಿತೂರಿ ಕುರಿತಾದ ಹೋರಾಟ ಇದಾಗಿದೆ ಎಂದರು.
ರಾಜಶೇಖರ ಮೆಣಸಿನಕಾಯಿ, ವೀರಣಗೌಡ ಪಾಟೀಲ್, ವಿಶಾಲ ವಾಘಮೋಡೆ, ಶ್ರೀಧರ ದೊಡ್ಡಮನಿ, ಸಂಗೀತಾ ಚಾವರೆ ನೂರಾರು ಅಭಿಮಾನಿಗಳು ಇದ್ದರು.