ಮೈಸೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದ ರೈತರಿಂದ 2.25 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಗಳಂತಹ ಅಧಿಕೃತ ಸಂಗ್ರಹಣ ಏಜೆನ್ಸಿಗಳು ರೈತರಿಂದ 1.71 ಲಕ್ಷ ಮೆ.ಟನ್ ಪರಿವರ್ತಿತ ಅಕ್ಕಿ ಸೇರಿ ಒಟ್ಟು 2.25 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಲಾಗಿದ್ದು, ಪ್ರತಿ ಎಕರೆಯಿಂದ ಕನಿಷ್ಠ 25 ರಿಂದ ಗರಿಷ್ಠ 40 ಕ್ವಿಂಟಾಲ್ವರೆಗೆ ಖರೀದಿಸಲಾಗುತ್ತಿದೆ.
ನೋಂದಣಿ ಆರಂಭ
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಟಾಸ್ಕ್ಫೋರ್ಸ್ ರಚಿಸಿ, ಸಭೆ ನಡೆಸಬೇಕು. ನ. 20ರೊಳಗೆ ಜಿಲ್ಲಾ ಮಟ್ಟದಲ್ಲಿಅಕ್ಕಿ ಗಿರಣಿಗಳ ಹಲ್ಲಿಂಗ್ ಸಾಮರ್ಥ್ಯ, ಭತ್ತ ಸಂಗ್ರಹಣ ಸಾಮರ್ಥ್ಯ, ಪರಿವರ್ತಿತ ಅಕ್ಕಿಯ ಸಾರವರ್ಧನೆ ಬಗ್ಗೆ ಟಾಸ್ಕ್ಫೋರ್ಸ್ನಿಂದ ಮಾಹಿತಿ ಸಂಗ್ರಹಿಸಬೇಕು. ಬೆಂಬಲ ಬೆಲೆಯಡಿ ಭತ್ತ ಖರೀದಿ ಬಗ್ಗೆ ಡಿ. 30ರವರೆಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಭತ್ತ ಸರಬರಾಜು ಮಾಡಲು ಮುಂದೆ ಬರುವ ರೈತರಿಗೆ ನ. 15ರಿಂದ ಡಿ. 31 ರೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಡಿ. 31ರಿಂದ 2024 ರ ಮಾ. 31ರೊಳಗೆ ರೈತರಿಂದ ಭತ್ತ ಖರೀದಿಸಿ, ಮಿಲ್ಗಳಲ್ಲಿ ಶೇಖರಿಸಿ, ಸಾರವರ್ಧಿತ ಅಕ್ಕಿಯನ್ನಾಗಿ ಪರಿವರ್ತಿಸುವ ಕಾರ್ಯ ಪೂರ್ಣಗೊಂಡಿರಬೇಕು ಎಂದು ಆದೇಶಿಸಲಾಗಿದೆ.
ಯಾವ ಏಜೆನ್ಸಿಗೆ ಯಾವ್ಯಾವ ಜಿಲ್ಲೆ?
ಸಂಗ್ರಹಣಾ ಸಂಸ್ಥೆ ಭತ್ತ, ರಾಗಿ, ಬಿಳಿ ಜೋಳ ಖರೀದಿಗೆ ನಿಯೋಜಿಸಿರುವ ಜಿಲ್ಲೆಗಳು
1. ಕರ್ನಾಟಕ ಆಹಾರ ನಾಗರಿಕ ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಸರಬರಾಜು ನಿಗಮಿತ ನಿಯಮಿತ. ರಾಮನಗರ, ಕೊಪ್ಪಳ, ವಿಜಯಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಕಲಬುರಗಿ, ಬೀದರ್ ಮತ್ತು ಯಾದಗಿರಿ
2. ಕರ್ನಾಟಕ ರಾಜ್ಯ ಸಹಕಾರ ಹಾಸನ, ಧಾರವಾಡ, ಗದಗ, ಚಿಕ್ಕಮಗಳೂರು, ಚಾಮರಾಜನಗರ , ಮಂಡ್ಯ , ಮಾರಾಟ ಮಹಾಮಂಡಳ ಶಿವಮೊಗ್ಗ, ಹಾವೇರಿ ಮತ್ತು ಚಿಕ್ಕ ಬಳ್ಳಾಪುರ.
3. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳ ಬಳ್ಳಾರಿ, ಬೆಳಗಾವಿ, ಕೊಡಗು, ಮೈಸೂರು , ರಾಯಚೂರು ಮತ್ತು ವಿಜಯನಗರ
ಧಾನ್ಯ ಬೆಂಬಲ ಬೆಲೆ (ಪ್ರತಿ ಕ್ವಿಂಟಾಲ್ಗೆ)
ಭತ್ತ (ಸಾಮಾನ್ಯ) 2,183 ರೂ.
ಭತ್ತ (ಗ್ರೇಡ್-ಎ) 2,203 ರೂ.
ಬಿಳಿಜೋಳ (ಹೈಬ್ರಿಡ್) 3,180 ರೂ.
ಬಿಳಿಜೋಳ (ಮಾಲ್ದಂಡಿ) 3,225 ರೂ.
ರಾಗಿ 3,846 ರೂ.