ರಾಯಚೂರು: ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಮನೆ ಮುಂದೆ ಯುವಕನ ಪುಂಡಾಟ ಮಾಡಿದ್ದು, ಯುವತಿ ಪೋಷಕರಿಗೆ ಕೊಲೆ ಬೆದರಿಕೆ ಹಾಕಿ ಹಲ್ಲೆ ಆರೋಪ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ವೆಂಕಟೇಶ್ವರ ನಗರದಲ್ಲಿ ನಡೆದಿದೆ. ಯುವತಿ ತಂದೆ ಹಾಗೂ ಪಾಗಲ್ ಪ್ರೇಮಿ ಗಲಾಟೆ ವಿಡಿಯೋ ವೈರಲ್ ಆಗಿದೆ.
ವೆಂಕಟೇಶ್ವರ ನಗರದ ಸತೀಶ್ ಎಂಬುವರ ಮನೆ ಬಳಿ ಯುವಕ ವಸಂತ್ ಕಿರಿಕ್ ಮಾಡಿದ್ದು, ಸತೀಶ್ ಎನ್ನುವವರ ಮಗಳು ಕಾಲೇಜಿಗೆ ಹೋಗುತ್ತಿದ್ದಳು. ಆಕೆಗೆ ಪ್ರೀತಿ ಮಾಡುವಂತೆ ಕಿರುಕುಳ ನೀಡಿದ್ದಾನಂತೆ ಅದಕ್ಕೆ ಆಕೆ ನಿರಾಕರಿಸಿದ್ದಾಳೆ.
Remedies For Corns: ಕಾಲಿನಲ್ಲಿ ಉಂಟಾಗುವ ಆಣಿಗಳಿಗೆ ಇಲ್ಲಿದೆ ಮನೆಮದ್ದುಗಳು..! ಒಮ್ಮೆ ಟ್ರೈ ಮಾಡಿ
ಆದರೆ ಅಷ್ಟಕ್ಕೆ ಸುಮ್ಮನಾಗದ ವಂಸಂತ ದಿನನಿತ್ಯ ಆಕೆಯು ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ. ಬೇಸತ್ತ ಯುವತಿ ಕೆಲ ದಿನಗಳ ಕಾಲ ಸಿಂಧನೂರನ್ನೇ ಬಿಟ್ಟು ಹೋಗಿದ್ದಳು. ಯುವತಿ ಮತ್ತೆ ಸಿಂಧನೂರಿಗೆ ಬಂದ ವಿಚಾರ ತಿಳಿದು ಕಂಠ ಪೂರ್ತಿ ಕುಡಿದು ವಸಂತ್ ಯುವತಿ ಮನೆಗೆ ಬಂದಿದ್ದಾನೆ.
ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಮನೆ ಮುಂದೆ ಪುಂಡಾಟ ಮೆರೆದಿದ್ದಾನೆ. ಯುವತಿ ತಂದೆ ಹಾಗೂ ಪಾಗಲ್ ಪ್ರೇಮಿ ಮಧ್ಯೆ ಹೊಡೆದಾಡಿಕೊಂಡಿದ್ದಾರೆ. ಕಿತ್ತಾಟದಲ್ಲಿ ಯುವತಿ ತಂದೆ ಸತೀಶ್ ಹಾಗೂ ಯುವಕ ವಸಂತ್ ಗೆ ಗಾಯಗಳಾಗಿವೆ. ಇಬ್ಬರು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.