ಚಿಕ್ಕೋಡಿ : ಇದೇ ಜ.21ರಂದು ಬೆಳಗಾವಿ ನಗರದಲ್ಲಿ ನಡೆಯಲ್ಲಿರುವ “ಜೈ ಬಾಪು, ಜೈ ಭೀಮ್ ಜೈ ಸಂವಿಧಾನ” ಶತಮಾನೋತ್ಸವ ಸಮಾವೇಶದ ಪೂರ್ವಭಾವಿ ಸಭೆ ನಡೆಸಲಾಯ್ತು. ಕುಡಚಿ ಪಟ್ಟಣದ ರೋಶನಿ ಪ್ಯಾಲೇಸ್ನಲ್ಲಿ ನಡೆದ ಸಭೆಯಲ್ಲಿ. ಬೆಂಗಳೂರಿನ ಪುಲಿಕೇಶ ನಗರದ ಶಾಸಕ ಎ ಸಿ ಶ್ರೀನಿವಾಸ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಅವರು, 1924ರಲ್ಲಿ ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆಯಲ್ಲಿ ಕಾಂಗ್ರೇಸ್ ಸಮಾವೇಶ ಜರುಗಿ ನೂರು ವರ್ಷಗಳ ಶತಮಾನೋತ್ಸವ ಸ್ಮರಣೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂದಿ, ರಾಹುಲ ಗಾಂಧಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಹಾಗೂ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ವಿವಿಧ ಮುಖಂಡರ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕರ್ತರು ಭಾಗವಹಿಸಲಿದ್ದು ಕುಡಚಿ ಮಾತು ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಲು ವಿನಂತಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಎ ಸಿ ಶ್ರೀನಿವಾಸ, ಮಹಾತ್ಮ ಗಾಂಧಿ ಅವರ ತ್ಯಾಗದಿಂದ ಇವತ್ತು ನಮ್ಮ ದೇಶ ಸ್ವತಂತ್ರವಾಗಿದೆ. ಡಾ; ಬಿ ಆರ್ ಅಂಬೇಡ್ಕರ ನೀಡಿದ ಸಂವಿಧಾನದ ಫಲವಾಗಿ ಇವತ್ತು ಅನೇಕರು ಶಾಸಕರಾಗಿದ್ದರೆ, ಸಚಿವರಾಗಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದರು.ಅಷ್ಟೆ ಯಾಕೆ ಚಹಾ ಮಾರುವ ರುವ ವ್ಯಕ್ತಿ ಒಬ್ಬರು ಈ ದೇಶದ ಪ್ರದಾನಿಯಾಗಲು ಕೂಡಾ ಸಾಧ್ಯವಾಗಿದೆ. ಎಂದರೆ ಅದು ಡಾ: ಬಿ ಆರ್ ಅಂಬೇಡ್ಕರ ಅವರು ನೀಡಿದ ಸಂವಿಧಾನ ಶಕ್ತಿ ಎಂದ್ರು.
ಇನ್ನೂ ಮಹೇಂದ್ರ ತಮ್ಮಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾಸ್ಮೀನ ಅಲಾಸೆ, ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಪುರಸಭೆ ಅಧ್ಯಕ್ಷ ಹಮಿದ್ದೀನ ರೋಹಿಲೆ, ಮುಶ್ಫಿಕ ಜಿನಾಬಡೆ, ಮುರಾರಿ ಬಾನೆ, ಪರಗೌಡ ಪಾಟೀಲ, ಗುರುಪಾದ ಚೌಗಲಾ, ಸಾಹೇಬಲಾಲ ರೋಹಿಲೆ, ಇಮಾಮದಿನ ಸಜ್ಜನ, ಅಬ್ದುಲಖಾದರ ರೋಹಿಲೆ,ಮಹಾದೇವ ಖಟಕಬಾವಿ, ಆನಂದ ಪಾಟೀಲ, ಲಲೀತಾ ಪೀಡಾಯಿ, ಮತಕ್ಷೇತ್ರದ ವಿವಿಧ ಗ್ರಾಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.