ತಿರುವಣ್ಣಾಮಲೈ: ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುಂಚಿತವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಉತ್ತಮ ಆಡಳಿತ ಮಾಡುವ ಶಕ್ತಿ ದೊರೆಯಲಿ ಮತ್ತು ಸಮೃದ್ಧಿಯಾಗಿ ಮಳೆ ಬೀಳಲಿ ಎಂದು ಪ್ರಾರ್ಥಿಸಿದ್ದೆ. ಈ ಕಾರಣಕ್ಕೆ ಮತ್ತೆ ದೇವರ ದರ್ಶನ ಮಾಡಿದೆ.
ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಗಳಿಗೆ ಪ್ರತಿಕ್ರಿಯೆ ನೀಡಿದರು.
Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ದೀಪಾವಳಿಗೆ ಡಬಲ್ ಧಮಾಕಾ ಆಫರ್ ಘೋಷಣೆ
“ಈ ದೇವಾಲಯ ಅತ್ಯುತ್ತಮ ವಸ್ತುಶಿಲ್ಪದಿಂದ ಕೂಡಿದ್ದು, ಸುಂದರವಾಗಿದೆ. ನಮ್ಮ ನೆಲದ ಶಿಲ್ಪಿಗಳು ಒಂದು ಸಾವಿರ ವರ್ಷಗಳ ಹಿಂದೆಯೇ ಅದ್ಬುತ ಕೈಚಳಕ ತೋರಿಸಿದ್ದಾರೆ” ಎಂದರು. ಕಳೆದ ವರ್ಷಕ್ಕೆ ಹೋಲಿಸಿದರೆ, ದೇವಸ್ಥಾನವನ್ನು ತಮಿಳುನಾಡು ಸರ್ಕಾರ ಅತ್ಯುತ್ತಮವಾಗಿ ಅಭಿವೃದ್ಧಿಗೊಳಿಸಿದೆ. ಇದು ನನಗೆ ಹೆಚ್ಚು ಸಂತೋಷವನ್ನು ನೀಡಿತು” ಎಂದು ಹೇಳಿದರು.