ಗದಗ-ಬೆಟಗೇರಿ ಆದರ್ಶ ಶಿಕ್ಷಣ ಸಮಿತಿ ಕಾಲೇಜಿನಲ್ಲಿ ಪ್ರತ್ಯಾಗ್ರ-2024 ಮಾರ್ಕೆಟಿಂಗ್ ಫುಡ್ ಫೆಸ್ಟ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿನಿತ್ಯ ತರಗತಿಗಳ ಓದು, ಬರಹದಲ್ಲಿ ಬ್ಯಸಿಯಾಗಿರ್ತಿದ್ದ ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಜ್ಞಾನವನ್ನ ನೀಡಲು ಸ್ವತಃ ವಿದ್ಯಾರ್ಥಿಗಳನ್ನೇ ವ್ಯಾಪಾರಸ್ಥರನ್ನಾಗಿ ಮಾಡಲಾಗಿತ್ತು. ಕಾಲೇಜಿನ ಆವರಣದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿ 10 ಜನ ವಿದ್ಯಾರ್ಥಿಗಳ ಗುಂಪಿಗೆ ಅವುಗಳನ್ನು ಹಂಚಿಕೆ ಮಾಡಿದ್ರು.
ವಿದ್ಯಾರ್ಥಿಗಳು ಸಹ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲ್ಲು ಥೇಟ್ ದೊಡ್ಡ ಡೊಡ್ಡ ಕಂಪನಿಗಳಂತೆಯೇ ಒಂದೊಂದು ವ್ಯಾಪಾರದ ಸ್ಟಾಲ್ ಗೂ ಒಬ್ಬೊಬ್ಬ ಬ್ರಾಂಡ್ ಅಂಬಾಸಿಡರ್ ಮಾಡಿ ಜೊತೆಗೆ ಮಾರ್ಕೆಟಿಂಗ್ ರಿಪ್ರೆಸೆಂಟೆಟಿವ್ ನೇಮಿಸಿ ವ್ಯಾಪಾರ ವಹಿವಾಟು ನಡೆಸಿದ್ರು. ಆ ಸ್ಟಾಲ್ ಗಳಲ್ಲಿ ವಿಶೇಷ ಖಾದ್ಯಗಳ ತಯಾರಿ ಮಾಡಿ ಮಾರಾಟ ಮಾಡಲು ವಿದ್ಯಾರ್ಥಿಗಳಲ್ಲೆ ಕಾಂಪಿಟೇಶನ್ ಕೂಡಾ ಇತ್ತು. ವಿದ್ಯಾರ್ಥಿಗಳೂ ಕೂಡಾ ಬಜಿ, ಮಿರ್ಚಿ, ಗಿರ್ಮಿಟ್, ಬನ್, ಸಮೋಸಾ, ಎಡಿಮಿ, ಮಜ್ಜಿಗೆ, ಲಸ್ಸಿ, ಐಸ್ ಕ್ರೀಮ್, ಜ್ಯೂಸ್ ತಯಾರಿಸಿ ಮಾರಾಟ ಮಾಡೋ ಮೂಲಕ ವ್ಯಾಪಾರ ವಹಿವಾಟು ಹೇಗೆ ಮಾಡಬೇಕು,
Vastu Tips: ಅಪ್ಪಿ ತಪ್ಪಿಯೂ ಚಪ್ಪಲಿಗಳನ್ನು ತಲೆಕೆಳಗಾಗಿ ಇಡಲೇಬಾರದು..! ಯಾಕೆ ಗೊತ್ತಾ..?
ಪ್ರಾಡಕ್ಟ್ ತಯಾರಿಕೆ ವಿಧಾನ, ಮಾರಾಟ, ಅಕೌಂಟ್ ಮೆಂಟೆನೆನ್ಸ್, ಜಮಾ ಖರ್ಚಿನ ಖಾತೆ ನಿರ್ವಹಣೆ ಹೇಗೆ ಮಾಡಿಕೊಳ್ಳಬೇಕೆಂಬುದರ ಬಗ್ಗೆಯೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿತುಕೊಂಡರು. ಕೊನೆಗೆ ನಿರ್ಣಾಯಕರು ವಿದ್ಯಾರ್ಥಿಗಳು ಮಾಡಿದ ವ್ಯಾಪಾರ ವಹಿವಾಟಿನ ಆಧಾರದ ಮೇಲೆ ಬಹುಮಾನ ವಿತರಣೆ ಕೂಡಾ ಮಾಡಲಾಯಿತು. ನೂರಾರು ವಿದ್ಯಾರ್ಥಿಗಳು ಪ್ರತ್ಯಾಗ್ರ-2024 ಮಾರ್ಕೆಟಿಂಗ್ ಫುಡ್ ಫೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡ್ರು.