ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ಭೀತಿ ಹುಟ್ಟಿಸಿದ ಯುವಕರಿಗೆ ಸಂಸದ ಪ್ರತಾಪಸಿಂಹ ಸಂಸತ್ ಭವನದ ಪಾಸ್ ನೀಡಿದ್ದರೆಂಬ ಕಾರಣಕ್ಕೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಸಂಸದ ಪ್ರತಾಪಸಿಂಹ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿಗೆ ಪ್ರತಾಪ್ ಸಿಂಹರವರೇ ನೇರ ಹೊಣೆ ಅಂತಾ ಆಕ್ರೋಶದಿಂದ ಘೋಷಣೆಗಳನ್ನು ಕೂಗಿದರು. ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಹಲವು ಕಾಂಗ್ರೆಸ್ ಮುಖಂಡರು ಬಾಗಿಯಾಗಿದ್ದರು.