ರಾಯಚೂರು: ಪ್ರತಾಪ್ ಸಿಂಹ ಏನಾದ್ರೂ ಹೇಳಲಿ. ಅವನಿಗೆ ಹೆದರಿಕೆ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅನ್ನೋ ಭಯ ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ರಾಯಚೂರು ಜಿಲ್ಲೆಯ ತಿಂಥಿಣಿಗೆ ಭೇಟಿ ನೀಡಿದ ವೇಳೆ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಯತೀಂದ್ರಗೆ ,
ನೀಡುವ ವಿಚಾರ ಸಂಬಂಧ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಟಿಕೆಟ್ ವಿಚಾರ ಯತೀಂದ್ರ ಎಲ್ಲೂ ಮಾತಾಡಿಲ್ಲ. ನಾನೂ ಕೂಡ ಹೇಳಿಲ್ಲ. ಬೈರತಿ ಸುರೇಶ್ ಅಲ್ಲಿ ಅಬ್ಸರ್ವರ್ ಆಗಿ ಹೋಗಿದ್ರು. ಅವರ ವರದಿ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ತೇವೆ ಎಂದರು.
ಇನ್ನು ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ನಾನು ಅಯೋಧ್ಯೆಗೆ ಹೋಗಲ್ಲ ಅಂತಾ ಎಲ್ಲೂ ಹೇಳಿಲ್ಲ. ಈ ವಿಷಯದಲ್ಲಿ ಬಿಜೆಪಿ ಅವ್ರು ರಾಜಕೀಯ ಮಾಡ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ನಮ್ಮ ಅಭ್ಯಂತರವಿಲ್ಲ. ಆದ್ರೆ ಬಿಜೆಪಿಯವರು ಅದನ್ನ ರಾಜಕೀಯವಾಗಿ ಬಳಸಿಕೊಳ್ತಿರೋದ್ರಿಂದ ನಮ್ಮ ವಿರೋಧವಿದೆ. ನಾನು ಹೋಗಲ್ಲ ಅಂದಿಲ್ಲ, ಹೋಗ್ತಿನಿ ಅಂದಿಲ್ಲ ಎಂದ ಸ್ಪಷ್ಟಪಡಿಸಿದರು.