ಹಾಸನ:- ರಾಜಕೀಯ ಷಡ್ಯಂತ್ರಕ್ಕೆ ಹೆಚ್ ಡಿ ರೇವಣ್ಣ ಬಂಧಿಸಲಾಗಿದೆ ಎಂದು ಮಾಜಿ ಶಾಸಕ ಕೆಎಸ್ ಲಿಂಗೇಶ್ ಹೇಳಿದ್ದಾರೆ.
ಎರಡನೇ ಹಂತದ ಲೋಕಸಭಾ ಚುನಾವಣೆ: ಹಾವೇರಿ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ದತೆ..!
ಈ ಸಂಬಂಧ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣದಲ್ಲಿ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಕೋರ್ ಕಮಿಟಿ ಸ್ವಾಗತಿಸಿದೆ ಆದರೆ ಅದು ತನಿಖೆಯಲ್ಲಿ ದಿಕ್ಕು ತಪ್ಪುತ್ತಿದೆಯಾ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು. ಟೇಪುಗಳು ಹೊರಬಿದ್ದ ಬಳಿಕ ಅವಮಾನದಿಂದ ಕಂಗಟ್ಟಿರುವ ಮಹಿಳೆಯರಿಗೆ ನೆರವು ಒದಗಿಸುವ ಕೆಲಸವನ್ನು ಎಸ್ಐಟಿ ಮಾಡಬೇಕಿತ್ತು. ಅದರೆ, ಅಧಿಕಾರಿಗಳು ಯಾವುದೇ ತಪ್ಪನ್ನು ಮಾಡದ ಮತ್ತು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿರುವ ಹೆಚ್ ಡಿ ರೇವಣ್ಣರನ್ನು ವಿನಾಕಾರಣ ಬಂಧಿಸಿದೆ ಎಂದು ಲಿಂಗೇಶ್ ಹೇಳಿದರು. ಕೆ ಆರ್ ನಗರದ ಶಾಸಕರ ಚಿತಾವಣೆ ಮೇರೆಗೆ ರೇವಣ್ಣರನ್ನು ಹಣಿಯಲು ಬಂಧಿಸಲಾಗಿದೆ ಎಂದು ಮಾಜಿ ಶಾಸಕ ಹೇಳಿದರು.
ರೇವಣ್ಣ ತಮ್ಮ ತಂದೆ-ತಾಯಿ ಅರೋಗ್ಯ ವಿಚಾರಿಸಲು ದೇವೇಗೌಡರ ಮನೆಗೆ ಹೋಗಿದ್ದರೇ ಹೊರತು ಅವರ ಮನೆಯಲ್ಲಿ ಅವಿತು ಕೂತಿರಲಿಲ್ಲ ಎಂದರು.