ಬೆಂಗಳೂರು: ಒಂದು ತಿಂಗಳಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಜ್ವಲ್ ಕಡೆಗೂ ಅರೆಸ್ಟ್ ಆಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಸದಾಶಿವನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
”ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದಾಗ ಆರೋಪಿತ ಪ್ರಜ್ವಲ್ ನಮ್ಮ ದೇಶದಲ್ಲೇ ಇದ್ದಿದ್ದರೆ, ನಮ್ಮ ತಂಡವನ್ನು ಕಳುಹಿಸಬಹುದಿತ್ತು. ಆದರೆ, ಅವರು ವಿದೇಶದಲ್ಲಿದ್ದ ಕಾರಣ ಬಂಧನ ತಡವಾಯಿತು. ಈಗ ಎಸ್ಐಟಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಧಿಕಾರಗಳ ಜೊತೆ ಮುಂದಿನ ಕ್ರಮದ ಕುರಿತು ಚರ್ಚಿಸುತ್ತೇವೆ” ಎಂದರು.
ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!
”ಆರೋಪಿ ಪ್ರಜ್ವಲ್ ರೇವಣ್ಣಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಎಲ್ಲವೂ ಪ್ರೊಸೀಜರ್ ಪ್ರಕಾರವೇ ನಡೆಯುತ್ತದೆ. ಸಂತ್ರಸ್ತ ಮಹಿಳೆಯರಿಗೆ ಬಂದು ದೂರು ನೀಡಲು ಮನವಿ ಮಾಡಿದ್ದೇವೆ. ಕಾನೂನು ರೀತಿ ತನಿಖೆ ಮುಂದುವರೆಯಲಿದೆ” ಎಂದು ತಿಳಿಸಿದರು.
”ನಿನ್ನೆ ಶಿವಮೊಗ್ಗಕ್ಕೆ ಹೋಗಿದ್ದೆ. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಬಿಜೆಪಿ ಸಹಜವಾಗಿಯೇ ಸಚಿವ ನಾಗೇಂದ್ರ ರಾಜೀನಾಮೆಗೆ ಬೇಡಿಕೆ ಇಟ್ಟಿದೆ. ಆದರೆ, ಸರ್ಕಾರದಲ್ಲಿ ನಮಗೆ ಜವಾಬ್ದಾರಿ ಇದೆ. ಜನತೆಗೆ ನಾವು ಉತ್ತರ ಕೊಡಬೇಕಾಗಿದೆ. ಹಾಗಾಗಿ ಆ ದೃಷ್ಟಿಯಲ್ಲಿ ತನಿಖೆ ನಡೆಯುತ್ತಿದೆ. ಸಚಿವರು ಮೌಖಿಕ ಆದೇಶ ನೀಡಿದ್ದರು ಎಂದು ಡೆತ್ ನೋಟ್ನಲ್ಲಿ ಇರುವುದನ್ನು ಪರಿಶೀಲನೆ ಮಾಡಬೇಕು. ಸಚಿವರು ಎಂದರೆ ಯಾರು? ಎಲ್ಲವನ್ನೂ ಪರಿಶೀಲಿಸಿ ತನಿಖೆ ಮಾಡಿ ನಂತರ ಕ್ರಮ ವಹಿಸಲಾಗುತ್ತಿದೆ” ಎಂದು ಹೇಳಿದರು.