ಬೆಂಗಳೂರು:- ಸಂಸದ ಪ್ರಜ್ವಲ್ ರೇವಣ್ಣ ಅವರ ಖಾಸಗಿ ವಿಡೀಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್ ಪಾಯಿಂಟ್ನಲ್ಲಿ ಜೆಡಿಎಸ್ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.
ವಾಹನ ಸವಾರರೇ ಎಚ್ಚರ: ನಾಳೆ ಸಂಜೆ ಮನೆಯಿಂದ ಹೊರಬರೋ ಮುನ್ನ ಈ ಸುದ್ದಿ ನೋಡಿ..!
ಜೆಡಿಎಸ್ ನಾಯಕಿ ತಮ್ಮ ಮೇಲೆ ಯಾವಾಗ ಅತ್ಯಾಚಾರ ನಡೆದಿದೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. 2021ರಲ್ಲಿ ಬಿಸಿಎಂ ಹಾಸ್ಟೆಲ್ ವಿಚಾರದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮಾತನಾಡಲು ಹೋದಾಗ ತಮ್ಮ ಮೇಲೆರಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ತಾವು ನಿರಾಕರಣೆ ಮಾಡಿದಾಗ ಗನ್ ಹಿಡಿದು ಹೆದರಿಸಿ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಹಾಸನದಲ್ಲಿರುವ ಸಂಸದರ ಬಂಗಲೆಯ ಮಹಡಿ ರೂಮ್ನಲ್ಲೇ ರೇಪ್ ಮಾಡಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ದೈಹಿಕ ಸಂಪರ್ಕ ಬೆಳೆಸಲು ಪ್ರಜ್ವಲ್ ಮುಂದಾಗುತ್ತಿದ್ದಂತೆ ನಾನು ನಿರಾಕರಣೆ ಮಾಡಿದೆ. ಆಗ “ನಿನ್ನ ಗಂಡನನ್ನು ನಾನು ಬಿಡಲ್ಲ” ಎಂದು ಹೆದರಿಸಿ ದೌರ್ಜನ್ಯ ನಡೆಸಿದರು ಎಂದು ಎಸ್ಐಟಿಗೆ ಸಂತ್ರಸ್ತೆ ನೀಡಿದ್ದ ದೂರು ಆಧಾರದಲ್ಲಿ ಸಿಐಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 376 (2) (ಎನ್) ಹಾಗೂ ಐಟಿ ಆ್ಯಕ್ಟ್ನಲ್ಲಿ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ. ಹೇಗೆಲ್ಲ ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಮೇಲೆ ಬಲಾತ್ಕಾರ ಮಾಡಿದ್ದಲ್ಲದೆ, ಅದನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಬಾಯಿ ಬಿಟ್ಟರೆ ಸೋಷಿಯಲ್ ಮೀಡಿಯಾದಲ್ಲಿ ನಿನ್ನ ವಿಡಿಯೊವನ್ನು ಬಿಡುತ್ತೇನೆ ಎಂಧು ಬೆದರಿಕೆ ಒಡ್ಡಿದ್ದಾರೆ. ನಾನು ಕರೆದಾಗೆಲ್ಲ ನೀನು ಬರಬೇಕು. ಇಲ್ಲದಿದ್ದರೆ ನನ್ನ ಬಳಿ ಇರುವ ವಿಡಿಯೊವನ್ನು ಹರಿಬಿಡುತ್ತೇನೆ ಎಂದು ಬೆದರಿಸಿ ಕಳುಹಿಸಿದ್ದಾರೆ. ಇಷ್ಟೇ ಅಲ್ಲದೆ, ಪದೇ ಪದೆ ವಿಡಿಯೊ ಕಾಲ್ ಮಾಡಿ ಬೆತ್ತಲೆಯಾಗು ತಾನು ನೋಡಬೇಕು ಎಂದು ಕಿರುಕುಳ ಕೊಟ್ಟು ನಗ್ನತೆಯನ್ನು ನೋಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ