ನವದೆಹಲಿ: ದೇಶದ ಯಾವುದೇ ಸಂಘಟನೆಯನ್ನು ಹೊಗಳುವುದು ಕಾನೂನು ಬಾಹಿರ ಆಗುವುದಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ನೋಟಿಸ್ನಲ್ಲಿ ಈ ಹಿಂದೆ ಧನಕರ್ ಅವರು ಆರ್ಎಸ್ಎಸ್ ಅನ್ನು ಹೇಗೆ ಹೊಗಳಿದ್ದರು ಎಂಬ ಅಂಶವನ್ನು ಕಾಂಗ್ರೆಸ್ ಉಲ್ಲೇಖಿಸಿದೆ.
ಅಲ್ಲದೇ ಧನಕರ್ ಆರ್ಎಸ್ಎಸ್ನ ಏಕಲವ್ಯ ಎಂದು ಬಣ್ಣಿಸಿದೆ. ಆರ್ಎಸ್ಎಸ್ ನಮ್ಮ ದೇಶದ ಹೆಮ್ಮೆಯ ಸಂಘಟನೆಯಾಗಿದೆ. ಆರ್ಎಸ್ಎಸ್ ಹೊಗಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
Animals in Dreams: ನಿಮ್ಮ ಕನಸಿನಲ್ಲಿ ಈ ಪ್ರಾಣಿಗಳು ಬಂದ್ರೆ ನಿಮಗೆ ಅದೃಷ್ಟ ಕೈ ಹಿಡಿಯಲಿದೆ!
ಭಾರತ ದೇಶದ ಯಾವುದೇ ಸಂಘಟನೆಯನ್ನು ಹೊಗಳುವುದು ಕಾನೂನು ಬಾಹಿರ ಆಗುವುದಿಲ್ಲ. ಉಪರಾಷ್ಟ್ರಪತಿಗಳು ಆರ್ಎಸ್ಎಸ್ ಬಗ್ಗೆ ಒಳ್ಳೆಯ ಮಾತು ಆಡಿರುವುದನ್ನ ಅಪರಾಧ ಅಂತ ಹೇಗೆ ಪರಿಗಣಿಸಿದೆ ಎಂಬುದೇ ಆಶ್ಚರ್ಯವಾಗಿದೆ. ಗಾಂಧಿ ಕುಟುಂಬದೊಂದಿಗೆ ಜಾರ್ಜ್ ಸೊರೊಸ್ ಸಂಪರ್ಕದ ವಿಚಾರವನ್ನು ದಿಕ್ಕುತಪ್ಪಿಸಲು ಕಾಂಗ್ರೆಸ್ ತಂತ್ರ ಮಾಡಿದೆ ಎಂದು ರಿಜಿಜು ಹೇಳಿದ್ದಾರೆ.