ಧಾರವಾಡ: ಯಾವುದೇ ಪದವಿ ಪಡೆಯದೇ ಹಾಗೂ ನೋಂದಣಿ ಇಲ್ಲದೇ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದ ನಕಲಿ ವೈದ್ಯರೊಬ್ಬರ ಆಸ್ಪತ್ರೆಯನ್ನು ಇದೀಗ ಸೀಜ್ ಮಾಡಿಕೊಡಲಾಗಿದ್ದು, ಅದನ್ನು ಓಪನ್ ಮಾಡಿಸಿಕೊಡುವಂತೆ ಕಾಂಗ್ರೆಸ್ ಮುಖಂಡರೊಬ್ಬರೊಂದಿಗೆ ಬಂದಿದ್ದ ನಕಲಿ ವೈದ್ಯನನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಧಾರವಾಡದ ಪ್ರವಾಸಿ ಮಂದಿರಕ್ಕೆ ಲಾಡ್ ಬಂದಿದ್ದಾರೆಂದು ತಿಳಿದರೆ ಅಲ್ಲಿಗೆ ಆ ವೈದ್ಯನನ್ನು ಕರೆದುಕೊಂಡು ಬಂದ ಕಾಂಗ್ರೆಸ್ ಮುಖಂಡ ಮುತ್ತುರಾಜ್ ಮಾಕಡವಾಲೆ ಎಂಬುವವರನ್ನು ಲಾಡ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಧಾರವಾಡದ ಭೂಸಪ್ಪ ಚೌಕ್ನಲ್ಲಿ ನೋಂದಣಿ ಇಲ್ಲದೇ ಹಾಗೂ ಯಾವುದೇ ಪದವಿ ಪಡೆಯದೇ ಕ್ಲಿನಿಕ್ ನಡೆಸುತ್ತಿದ್ದ ತರುಣಕುಮಾರ್ ಎಂಬುವವರ ಆಸ್ಪತ್ರೆಯನ್ನು ಇತ್ತೀಚೆಗೆ ಸೀಜ್ ಮಾಡಲಾಗಿದೆ. ಇದನ್ನು ಓಪನ್ ಮಾಡಿಸಿಕೊಡುವಂತೆ ಮಾಕಡವಾಲೆ ಎಂಬುವವರು ಆ ವೈದ್ಯನೊಂದಿಗೆ ಲಾಡ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ ಇದರ ಬಗ್ಗೆ ಮಾಹಿತಿ ಪಡೆದ ಸಚಿವ ಲಾಡ್, ಈ ವೈದ್ಯನಿಗೆ ಯಾವುದೇ ಪದವಿ ಇಲ್ಲ. ನೋಂದಣಿ ಸಹ ಮಾಡಿಸಿಲ್ಲ.
16ರ ಹುಡುಗನೊಂದಿಗೆ 32 ವರ್ಷದ ಮಹಿಳೆಯ ಲವ್.! 9 ತಿಂಗಳ ಮಗುವಿಗೆ ತಂದೆಯಾದ ಬಾಲಕ
ಹೀಗಿರುವಾಗ ಇಂತವರ ಬಗ್ಗೆ ವಕಾಲತ್ತು ವಹಿಸಿಕೊಂಡು ಮಾತನಾಡಲು ಬಂದಿದ್ದೀರಾ? ಯಾರಾದರೂ ಸತ್ತರೆ ಏನು ಮಾಡುತ್ತೀರಿ? ಎಂದು ಇಬ್ಬರನ್ನೂ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡು ಕಳುಹಿಸಿದ್ದಾರೆ. ಆಂಧ್ರಪ್ರದೇಶ ಮೂಲದ ತರುಣಕುಮಾರ್ ಎನ್ನುವವರು ಭೂಸಪ್ಪ ಚೌಕ್ನಲ್ಲಿ ಕಳೆದ 30 ವರ್ಷಗಳಿಂದ ಕ್ಲಿನಿಕ್ ಇಟ್ಟುಕೊಂಡು ಪೈಲ್ಸ್ ಚಿಕಿತ್ಸೆ ನೀಡುತ್ತ ಬಂದಿದ್ದಾರೆ. ಇದೀಗ ಇವರ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ.