ಖ್ಯಾತ ನಟ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಅವರು ಹೊಸ ಸಿನಿಮಾ (New Movie) ಬಗ್ಗೆ ಅಪ್ ಡೇಟ್ ಸಿಗಲಿದೆ. ಪ್ರಭಾಸ್ ಅವರ 24ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಅನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ಸಂಕ್ರಾಂತಿ ಹಬ್ಬ ಪ್ರಭಾಸ್ ಅಭಿಮಾನಿಗಳಿಗೆ ಎಳ್ಳು ಬೆಲ್ಲ ತರಲಿದೆ.
ಪ್ರಭಾಸ್ ಅವರ ಮುಂದಿನ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದು, ಖ್ಯಾತ ನಿರ್ದೇಶಕ ಮಾರುತಿ (Maruti) ಈ ಚಿತ್ರದ ನಿರ್ದೇಶಕರು. ಬಸ್ ಸ್ಟಾಪ್, ಎ ರೋಜುಲೋ ಸೇರಿದಂತೆ ಹಲವು ಚಿತ್ರಗಳನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರ 24ನೇ ಚಿತ್ರಕ್ಕಾಗಿ ಇವರು ಹೊಸ ಬಗೆಯ ಕಥೆಯನ್ನು ಹುಡುಕಿ ತಂದಿದ್ದಾರೆ.
ಪ್ರಭಾಸ್ ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾ ಮುಗಿಸಿದ್ದಾರೆ. ಸಲಾರ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಜೊತೆಗೆ ಮತ್ತೆರಡು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಭಾಸ್ ಸತತ ಐದು ವರ್ಷಗಳ ಕಾಲ ಬ್ಯೂಸಿಯಾಗಿದ್ದಾರೆ.