ಬೆಂಗಳೂರು:- ವಿದ್ಯುತ್ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗೆ ಬೆಸ್ಕಾಂ ಭಾರೀ ದಂಡ ವಿಧಿಸಿದೆ.
ಇನ್ನು ಈ ಕುರಿತು ಬೆಸ್ಕಾಂ ಬೆಸ್ಕಾಂ ಜಾಗೃತಾ ದಳದ ಡಿವೈಎಸ್ ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆ ಆಗುತ್ತದೆ ಎನ್ನುವುದನ್ನು ಲೆಕ್ಕ ಮಾಡಿದ್ದರು. ಇದರಿಂದ ಎರಡು ದಿನ ಎಷ್ಟು ಬಳಕೆ ಆಗಿದೆ ಎಂಬುದರ ಲೆಕ್ಕ ತೆಗೆದು, ನ.14 ರಂದು ಅಧಿಕಾರಿಗಳು ರಿಪೋರ್ಟ್ ನೀಡಿದ್ದರು. ಇದೀಗ ಬೆಸ್ಕಾಂ ಇಲಾಖೆ ಬರೊಬ್ಬರಿ 68 ಸಾವಿರ ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದಲ್ಲಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ವಿಚಾರ ಭಾರಿ ಸುದ್ದಿಯಾಗಿತ್ತು. ಅದೇ ರೀತಿ ಅವರ ನಿವಾಸದ ಮುಂಭಾಗ ಪೋಸ್ಟರ್ಗಳು ಕಾಣಿಸಿಕೊಂಡಿತ್ತು.
ಬಳಿಕ ಪೋಸ್ಟರ್ಗಳನ್ನು ಪೊಲೀಸರು ತೆರವು ಮಾಡಿದ್ದರು. ಇದೀಗ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಮನೆಗೆ ತೆರಳಿ ಪರಿಶೀಲನೆ ಮಾಡಿ, ಬಳಿಕ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದ್ದರು. ಇದೀಗ ಅಕ್ರಮ ವಿದ್ಯುತ್ ಬಳೆಕೆಯ ದಂಡವನ್ನು ಬೆಸ್ಕಾಂ ಇಲಾಖೆ ವಿಧಿಸಿದೆ.