ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಮಹಿಳೆಯರು ತಿಳಿಯಲೇಬೇಕಾದ ಸುದ್ದಿ: ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?
ನಾಳೆ 66\11ಕೆ.ವಿ ಸುಬ್ರಮಣ್ಯಪುರ ಗುಬ್ಬಲಾಳ, ಉತ್ತರಹಳ್ಳಿ, ಇಸ್ರೋ ಲೇಹೌಟ್ ಇಂಡಸ್ಟ್ರಿಯಲ್ ಏರಿಯಾ, ಆದರ್ಶ ಅರ್ಪಾಟ್ಮೆಂಟ್ 1 & 2, ಮಂತ್ರಿ ಟ್ರಾನ್ಕಿವಲ್ ಅರ್ಪಾಟ್ಮೆಂಟ್ ಮಾರುತಿ ಲೇಹೌಟ್, ಭಾರತ್ ಲೇಹೌಟ್, ದೊಡ್ಡಕಲ್ಲಸಂದ್ರ ಇಂಡಸ್ಟ್ರಿಯಲ್ ಏರಿಯಾ, ಕುಮಾರಸ್ವಾಮಿ ಬಡಾವಣೆ, ವಿಟಲ ನಗರ, ಯಾದಳಾಂ ನಗರ, ಮಾರುತಿ ನಗರ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಸೆಪ್ಟೆಂಬರ್ 18ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಪ್ರದೇಶಗಳ ಸಾರ್ವಜನಿಕರು ಸೆಪ್ಟೆಂಬರ್ 18ರಂದು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಸಾರ್ವಜನಿಕರು ವಿದ್ಯುತ್ ಸಂಬಂಧಿತ ಯಾವುದೇ ದೂರುಗಳು ಇದ್ದರೂ 1912 ಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.