ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಶನಿವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ವಿದ್ಯುತ್ ಉಪಕೇಂದ್ರವಾದ 66/11 ಕೆವಿಎ ಸಹಕಾರನಗರ ಕೇಂದ್ರದಲ್ಲಿ , ಟ್ರಾನ್ಸ್ ಫಾರ್ಮರ್ ಮತ್ತು ಬೇಸ್ ಮತ್ತು 66 ಕೆವಿ ಬಸ್ ನಿರ್ವಹಣೆ ಕೆಲಸಗಳಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಡಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸರ್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್ಎಸ್ ಲೇಔಟ್, ಸರ್ಯೋದಯ ನಗರ. ೨ , ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ ಜಕ್ಕೂರು, ವಿಆರ್ಎಲ್ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಮೊದಲೇ ಮಾಹಿತಿಯನ್ನು ನೀಡಿದೆ.