ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಾಳೆಯಿಂದ ಎರಡು ದಿನ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ರವರೆಗೆ ಮತ್ತು ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ಇರುವುದಿಲ್ಲ. ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 4ಗಂಟೆವರೆಗೆ ಎ.ಕೆ.ಅಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ ೧ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರೀಯ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್ ಭುವನೇಶ್ವರಿನಗರ, ಬಿ.ಇ.ಎಲ್. ಕಾರ್ಪೋರೇಟ್ ಆಫೀಸ್ ಚಾಣಕ್ಯ ಲೇಔಟ್ ನಾಗವಾರ, ಎಂ.ಎಸ್. ರಾಮಯ್ಯ ಉತ್ತರ ಸಿಟಿ, ಥಣಿಸಂದ್ರ ಮುಖ್ಯ ರಸ್ತೆ, ಆಶಿರ್ವಾದ್ ನಗರ, ಅಮರಜ್ಯೋತಿ ಲೇಔಟ್ ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್ಕ್ಲೇವ್, ಶ್ರೀರಾಂಪುರ ವಿಲೇಜ್, ವಿ.ಹೆಚ್.ಬಿ.ಸಿ.ಎಸ್ ಲೇಔಟ್ ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, 17 ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳು ಇದರಲ್ಲಿ ಇರಲಿವೆ.
ಶುಕ್ರವಾರ 20.12.2024 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.