ತಮಿಳಿನ ಜನಪ್ರಿಯ ಹಾಸ್ಯನಟ (Tamil Actor) ಬೋಂಡಾ ಮಣಿ (Bonda Mani) ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಡಿ.23ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ನಿಧನ ಕುಟುಂಬಕ್ಕೆ ಮತ್ತು ಫ್ಯಾನ್ಸ್ಗೆ ಶಾಕ್ ಕೊಟ್ಟಿದೆ.
ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 60 ವರ್ಷದ ನಟ ಬೋಂಡಾ ಮಣಿ ಅವರು ಪೊಜಿಚಲೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮೂರ್ಛೆ ತಪ್ಪಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸುವ ಮುನ್ನವೇ ಬೋಂಡಾ ಮಣಿ ವಿಧಿವಶರಾಗಿದ್ದರು.
ನಟ ಧನುಷ್ (Dhanush) ಮತ್ತು ವಿಜಯ್ ಸೇತುಪತಿ (Vijay Sethupathi) ಅವರು ಬೋಂಡಾ ಮಣಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಮಾಡಿದ್ದರು. ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದು, 270ಕ್ಕೂ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ತಮಿಳು ಬೋಂಡಾ ಮಣಿ ಅವರ ನಿಧನಕ್ಕೆ ಫ್ಯಾನ್ಸ್ ಸೇರಿದಂತೆ ಸಿನಿಮಾ ತಾರೆಯರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.