ನಟನೆ, ನಿರೂಪಣೆ, ರೇಡಿಯೊ ಜಾಕಿ, ಹಾಸ್ಯದ ಮೂಲಕವೇ ಮನೆಮಾತಾಗಿದ್ದ ಅಪರ್ಣಾ ವಸ್ತಾರೆ (Aparna Vastarey) ಅವರು ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಗುರುವಾರ (ಜುಲೈ 11) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಕನ್ನಡದ ಸಿನಿಮಾ ನಟರು ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ವಸ್ತಾರೆ ನಿಧನ
ನಿರೂಪಕಿ ಅಪರ್ಣಾ ಬಾರದ ಲೋಕಕ್ಕೆ ತೆರಳಿದ್ದಾರೆ. ಅಪರ್ಣಾ ನೆನೆದು ಪತಿ ನಾಗರಾಜ್ ವಸ್ತಾರೆ ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಪತ್ನಿಯ ಮನದಾಳ ಮಾತು ಹೇಳಿಕೊಂಡಿದ್ದಾರೆ. ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನ ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. ಆಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾ ಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳುವಂತೆ ತಿಳಿಸಿದ್ದರು.
ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ದರು. ಅವಳು ಛಲಗಾತಿ ನಾನು ಬದುಕ್ತೀನಿ ಅಂತಾ ಇದ್ಲು, ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ದಳು. ಫೆಬ್ರವರಿಯಿಂದ ಸೋತಿದ್ದಳು, ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು
ಇಂದು ಬೆಳಗ್ಗೆ 7:30 ಗಂಟೆ ಕರೆದುಕೊಂಡು ಬರುತ್ತೇನೆ, ಮನೆ ಬಳಿ 11:30 ರವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 12 ಗಂಟೆಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ. ಬನಶಂಕರಿ ಎರಡನೇ ಹಂತದಲ್ಲಿರೋ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.