ಸತತ ವೈಫಲ್ಯಗಳಿಂದ ಬಳಲುತ್ತಿರುವ ಸಂಜು ಸ್ಯಾಮ್ಸನ್ಗೆ ತಂಡದಿಂದ ಗೇಟ್ಪಾಸ್ ಸಿಕ್ಕಿದೆ.
ಕರ್ನಾಟಕದಲ್ಲಿ ನಡೆದ 2 ದೊಡ್ಡ ಹಗರಣದಲ್ಲಿ ಸಿಎಂ ಅಪರಾಧಿ: ಸಚಿವೆ ಶೋಭಾ ಕರಂದ್ಲಾಜೆ!
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸಂಜು ಪ್ರದರ್ಶನ ಉತ್ತಮವಾಗಿಲ್ಲ. ಎರಡನೇ ಪಂದ್ಯದಲ್ಲಿ ಬೇಗ ಔಟಾದ ಸಂಜು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗಿದ್ದರು.
ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಕಲೆಹಾಕಿದ್ದ ಸಂಜು ಸ್ಲೋ ಬಾಲ್ಗೆ ಬಲಿಯಾಗಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲೂ 7 ಎಸೆತಗಳಲ್ಲಿ 2 ಬೌಂಡರಿ ಸಹಿತ 10 ರನ್ ಕಲೆಹಾಕಿದ್ದ ಸಂಜು, ಮತ್ತೊಮ್ಮೆ ಸ್ಲೋ ಬಾಲ್ಗೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಸಂಜು ತಮ್ಮ ಕಳಪೆ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಇದರ ಫಲವಾಗಿ ಸಂಜು ಅವರನ್ನು ದೇಶೀ ಟೂರ್ನಿ ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಂದ ತಂಡದಿಂದ ಕೈಬಿಡಲಾಗಿದೆ. ಈ ಆವೃತ್ತಿಯ ರಣಜಿ ಟ್ರೋಫಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಎಲ್ಲಾ ತಂಡಗಳನ್ನು ಪ್ರಕಟಿಸಲಾಗುತ್ತಿದೆ, ಅದರಂತೆ ಕೇರಳ ತಂಡವನ್ನು ಸಹ ಪ್ರಕಟಿಸಲಾಗಿದೆ.