ಬೆಳಗಾವಿ: ಜನವರಿ 14ರ ಸಂಕ್ರಾಂತಿಯಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೀಡಾದ ಘಟನೆ ಬೆಳಗಾವಿಯ ಕಿತ್ತೂರು ಬಳಿ ನಡೆದಿದ್ದು, ಘಟನೆಯಲ್ಲಿ ಲಕ್ಷ್ಮಿ ಅವರ ಬೆನ್ನಿಗೆ ಗಂಭೀರವಾದ ಗಾಯವಾಗಿದ್ದು, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಮುಖ, ತಲೆಗೆ ಗಾಯವಾಗಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಇವರನ್ನು ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.
ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ
ಆದ್ರೆ. ಲಕ್ಷ್ಮಿ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅವಶ್ಯಕತೆಯಿದೆ. ಅದರೆ ರಾಜಕಾರಣಿಗಳಿಗಳು ಮತ್ತು ಅಭಿಮಾನಿಗಳು ಎಡೆಬಿಡದೆ ಆಸ್ಪತ್ರೆಗೆ ಭೇಟಿ ನೀಡಿ ಸಚಿವೆಯ ವಿಶ್ರಾಂತಿಗೆ ಭಂಗ ತರುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಅವರು ತಲೆನೋವಿನಿಂದ ಬಳಲಿದ್ದಾರೆ ಮತ್ತು ಸ್ಮೃತಿ ತಪ್ಪುವ ಸೆನ್ಸೇಷನ್ ಕಾಡಿದೆ.
ನ್ಯೂರೋ ಸರ್ಜನ್ ಒಬ್ಬರು ಸಚಿವೆಯನ್ನು ಪರೀಕ್ಷಿಸಿ ವಿಶ್ರಾಂತಿಯಿಲ್ಲದ ಕಾರಣ ಹಾಗಾಗುತ್ತಿದೆ, ಅವರಿಗೆ 48 ತಾಸು ಕಂಪ್ಲೀಟ್ ರೆಸ್ಟ್ ಬೇಕು, ಮಾತಾಡಲೇಬಾರದು ಎಂದಿದ್ದಾರೆ. ಹಾಗಾಗಿ, ಅವರನ್ನು ನೋಡಲು, ಆರೋಗ್ಯ ವಿಚಾರಿಸಲು ಯಾರೂ ಬರಬಾರದು ಎಂದು ಡಾ ರವಿ ಪಾಟೀಲ್ ಮನವಿ ಮಾಡಿದ್ದಾರೆ.