ಬೆಂಗಳೂರು: ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಅವರು ಈಗಾಗಲೇ ಮಧ್ಯಂತರ ಜಾಮೀನು ಪಡೆದು ಹೊರಗೆ ಇರುವುದರಿಂದ ಅವರಿಗೆ ಯಾವುದೇ ಹೆಚ್ಚಿನ ಚಿಂತೆ ಇಲ್ಲ. ತುರ್ತು ಆಪರೇಷನ್ ಅಗತ್ಯ ಎಂದು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಇದೀಗ ರಾಜಕೀಯ ವ್ಯಕ್ತಿಗಳು ಕೊಲೆ ಮಾಡಿ ಆರಾಮಾಗಿ ಇರ್ತಾರೆ. ದರ್ಶನ್ ಕೇಸ್ ಬಗ್ಗೆ ತೋರಿಸಿ ತೋರಿಸಿನೇ ಇಷ್ಟು ದೊಡ್ಡದಾಗಿದೆ ಎಂದು ನಟ ದರ್ಶನ್ ಪರ ಸರಿಗಮ ವಿಜಿ ಹೇಳಿದ್ದಾರೆ.
Weight Loss: ತೂಕ ಇಳಿಕೆಗಾಗಿ ಉಪವಾಸ ಮಾಡ್ತಿರಾ..? ಹಾಗಾದ್ರೆ ಈ ಸಲಹೆಗಳ ಬಗ್ಗೆ ಗಮನಹರಿಸಿ!
ನಗರದಲ್ಲಿ ಮಾತನಾಡಿದ ಅವರು, ದರ್ಶನ್ ತಪ್ಪು ಮಾಡಿಲ್ಲ ಅಂತ ನಾನು ಹೇಳಲ್ಲ. ದರ್ಶನ್ ಅವ್ರ ಈ ಘಟನೆಯನ್ನೇ ಪದೇ ಪದೇ ತೋರಿಸಿ ನೆಗೆಟಿವ್ ಆಗ್ತಿದೆ. ದರ್ಶನ್ ಆತ್ಮೀಯರು ಅಂತ ಸಮರ್ಥಿಸಿ ಕೊಳ್ತಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟ ವಿಜಿ, ದರ್ಶನ್ ಆತನನ್ನು ಬೇಕು ಅಂತ ಕರ್ಕೊಂಡು ಬಂದು ಚುಚ್ಚಿ ಸಾಯಿಸಿದ್ದಲ್ಲ. ಈ ಘಟನೆ ನೋಡಿದ್ರೆ ಆಕಸ್ಮಿಕ ಎನ್ನುವಂತೆ ಕಾಣ್ತುದೆ ಎಂದು ಹೇಳಿದ್ದಾರೆ.