ಕೋಲಾರ: ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ವ್ಯಕ್ತಿಯ ವಿಧಿ ವಿಧಾನ ಕಾರ್ಯಗಳನ್ನು ಕೋಲಾರ ಗ್ರಾಮಾಂತರ ಪೋಲೀಸರು ನೇರವೇರಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಅಮರ್ ನಾಥ ಮೃತ ದುರ್ದವೈ. ಈತ ಪೇಟಂರ್ ಕೆಲಸ ಮಾಡುತ್ತಿದ್ದ. ಬೆಂಗಳೂರು ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕೋಲಾರದ ಕೆಂದಟ್ಟಿ ಬಳಿ ಮೃತಪಟ್ಟಿದ್ದ.
ಅಮರನಾಥ್ ಮೃತದೇಹವನ್ನು ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆದರೆ ಅಮರನಾಥ್ ಕುಟುಂಬಸ್ಥರು ಬಡವರಾಗಿದ್ದರಿಂದ ಮೃತ ದೇಹವನ್ನು ಉತ್ತರ ಪ್ರದೇಶದ ಊರಿಗೆ ಸಾಗಿಸುವಷ್ಟು ಸ್ಥಿತಿವಂತರಾಗಿರಲಿಲ್ಲ.
ಹೀಗಾಗಿ ಮೃತನ ಕುಟುಂಬದವರ ಕೋರಿಕೆಯಂತೆ ಕೋಲಾರ ಗ್ರಾಮಾಂತರ ಠಾಣೆಯ ಸಿಪಿಐ ಕಾಂತರಾಜು, ಸಿಬ್ಬಂದಿಗಳಾದ ಮಂಜುನಾಥ್, ಕುಮಾರ್, ಶಿವರಾಜಾಚಾರಿ, ತಮ್ಮ ಸ್ವಂತ ಖರ್ಚಿನಿಂದ ಗಲ್ ಪೇಟೆ ಚಿತಾಗಾರದಲ್ಲಿ ಮೃತ ದೇಹದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಂಬಂದಿಕರು ಹಾಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.