ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ
32 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನ ಮಾಡಿದ್ದಾರೆ. ಹುಬ್ಬಳ್ಳಿಯ ವಿನಾಯಕ ಜಿತೂರಿ, ವಿನಾಯಕ ಸಿದ್ಲಿಂಗ್, ಈಶ್ವರ್ ಪವಾರ್, ರೋಹಿತ್ ಅರಸಿದ್ದಿ ಬಂಧಿತರು ಆಗಿದ್ದುಗೋವಾದಿಂದ ವಿಸ್ಕಿ, ಓಡ್ಕಾ ತಂದು ಬ್ರಾಂಡೆಡ್ ಕಂಪನಿ ಬಾಟಲ್ಗಳಿಗೆ ಹಾಕಿ ಮಾರುತ್ತಿದ್ದರು ಎನ್ನಲಾಗಿದೆ.
ಹುಬ್ಬಳ್ಳಿ- ಕಾರವಾರ ರಸ್ತೆಯ ಮಿಶ್ರಿಕೋಟಿ ಕ್ರಾಸ್ ಹತ್ತಿರದ ಗೋದಾಮಿನಲ್ಲಿ ಅಕ್ರಮವಾಗಿ ಸಿದ್ದವಾಗುತ್ತಿದ್ದ ಸಾರಾಯಿ ಮಾಹಿತಿ ಆಧಾರ ಮೇಲೆ ಎಸ್ಪಿ ಗೋಪಾಲ ಬ್ಯಾಕೋಡ್, ಎಎಸ್ಪಿ ನಾರಾಯಣ ಬರಮನಿ, ಸಿಪಿಐ ಶ್ರೀಶೈಲ್ ಕೌಜಲಗಿ ನೇತ್ರತ್ವದ ತಂಡದ ಕಾರ್ಯಾಚರಣೆ ಗೋವಾ ಮದ್ಯವನ್ನು ಬಾಟ್ಲಿಂಗ್, ಕಲರಿಂಗ್ ಮಾಡಿ ಇಂಪೀರಿಯಲ್ ಬ್ಲೂ ಹೆಸರಿನ ಬ್ರಾಂಡ್ ತಯಾರಿಸುತಿದ್ದರು 244 ಬಾಕ್ಸ್ ಸಾರಾಯಿ, ಬೈಕ್, ಮೊಬೈಲ್ ಜಪ್ತಿ ಮಾಡಿದ್ದಾರೆ.