ಗದಗ: ಪೊಲೀಸ್ ಸ್ಟೇಷನ್ ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಮಾತನಾಡ್ತಾ ಅವರದ್ದೇ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮುಲ್ಲಾ ಎಂಬ ವ್ಯಕ್ತಿಯಿಂದ ಮೊಬೈಲ್ ಕಳ್ಳತನ ಮಾಡಲಾಗಿದ್ದು, ಮಹಿಳಾ ಸಿಬ್ಬಂದಿ ಜೊತೆ ಮಾತನಾಡುತ್ತಲೇ ಮೊಬೈಲ್ ಗೆ ಕೈ ಹಾಕುವ ದೃಶ್ಯ ಸ್ಟೇಷನ್ ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಮುಲ್ಲಾ ಪೊಲೀಸ್ ಸ್ಟೇಷನ್ ಗೆ ಬಂದಿದ್ದನು. ಬಿಲ್ ಕೊಡದ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ ಸ್ಟೇಷನ್ ಗೆ ಬಂದಿದ್ದ ಎಂದು ಹೇಳಲಾಗಿದೆ. ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ನಿಂತು ಮೊಬೈಲ್ ಕದ್ದಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.