ಬೆಂಗಳೂರು: ಶಾಸಕರ ಭವನದಲ್ಲಿ ಅಪಘಾತ ಸಂಭಸಿದ್ದು, ಶಾಸಕ ಶಿವಲಿಂಗೇಗೌಡ ಕಾರಿಗೆ ಪೊಲೀಸ್ ವಾಹನ ಗುದ್ದಿರುವ ಘಟನೆ ನಡೆದಿದೆ. ಪೊಲೀಸ್ ವಾಹನ ಗುದ್ದಿದ ರಭಸಕ್ಕೆ ಶಿವಲಿಂಗೇಗೌಡರ ಕಾರು ಜಖಂ ಆಗಿದೆ. ಶಿವಲಿಂಗೇಗೌಡರ ಸರ್ಕಾರಿ ಇನ್ನೋವಾ ಕಾರು ಶಾಸಕರ ಭವನದ ಮುಂದೆ ನಿಂತಿತ್ತು.
ಈ ವೇಳೆ ಮತ್ತೊಂದು ಬದಿಯಿಂದ ಬಂದ ಪೊಲೀಸ್ ಜೀಪ್ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶಾಸಕರ ಕಾರು ಜಖಂ ಆಗಿದೆ. ಕಾರಿನ ಚಾಲಕ ಕೂರುವ ಸೀಟ್ ಡೋರ್ಗೆ ಡ್ಯಾಮೇಜ್ ಕೂಡ ಆಗಿದೆ.
ಶಾಸಕ ಶಿವಲಿಂಗೇಗೌಡ ಅವರು ಶಾಸಕರ ಭವನದಿಂದ ವಿಧಾನಸೌಧದ ಕಡೆಗೆ ತೆರಳುವವರಿದ್ದರು. ಇದೇ ವೇಳೆ ಪೊಲೀಸ್ ಜೀಪ್ ಚಲಾಯಿಸುತ್ತಿದ್ದ ಸಿಬ್ಬಂದಿ ನಿಯಂತ್ರಣ ತಪ್ಪಿ ನೇರವಾಗಿ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇನ್ನೋವಾ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಪೊಲೀಸ್ ಜೀಪ್ ಗುದ್ದಿದ ಪರಿಣಾಮ ಕಾರಿನ ಮುಂಭಾಗದ ಡೋರ್ಗೆ ಸಂಪೂರ್ಣ ಹಾನಿಯಾಗಿದೆ.