ಬೆಂಗಳೂರು: ದರ್ಶನ್ ಜಾಮೀನು ಪಡೆದು ಮನೆಗೆ ಬಂದ್ರೂ ಇನ್ನು ಚಿಕಿತ್ಸೆ ಪಡೆಯೋಕೆ ಮುಂದಾಗಿಲ್ಲ. ಇತ್ತ ನಗರ ಪೊಲೀಸ್ ಆಯುಕ್ತರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೋರೆ ಹೋಗಲು ಮುಂದಾಗಿದ್ದಾರೆ. ಹೀಗಾಗಿಯೇ ಕಮೀಷನರ್ ದಯಾನಂದ್ ತನಿಖಾಧಿಕಾರಿಗಳು, ವಕೀಲರು ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದಾರೆ.
ಈ ವೇಳೆ ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ಬಳಿಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲು ಚರ್ಚೆ ನಡೆದಿದೆ. ಇವತ್ತಿನಿಂದ ಸೋಮವಾರದವರೆಗೂ ಕೋರ್ಟ್ ರಜೆ ಇರೋ ಕಾರಣಕ್ಕೆ ಸೋಮವಾರ ಆದೇಶ ಪ್ರತಿ ಪಡೆದು ಅದನ್ನು ಪರಿಶೀಲನೆ ನಡೆಸಿ ಮುಂದಿನ ವಾರ ಸುಪ್ರೀಂಕೋರ್ಟ್ ಮೋರೆ ಹೋಗಲಿದ್ದಾರೆ. ಇದೇ ವೇಳೆ ಮೆಡಿಕಲ್ ಬೋರ್ಡ್ ಒಪೀನಿಯನ್ ಗೂ ಮನವಿ ಮಾಡೋದ್ರ ಜೊತೆಗೆ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಲಿದ್ದಾರೆ.
ಬೆಳೆ ವಿಮೆ ಮಾಡಿಸಿದರೂ ರೈತರಿಗೇಕೆ ಹಣ ಜಮೆಯಾಗಲ್ಲ.? ಇಲ್ಲಿದೆ ಅಸಲಿ ಕಾರಣ
ಇಷ್ಟೆಲ್ಲ ಬೆಳವಣಿಗೆಗಳ ಜೊತೆಗೆ ಇವತ್ತು ದರ್ಶನ್ ಮಗ ವಿನೀಶ್ ದು ಬರ್ತಡೇ ಇದೆ. ಹೀಗಾಗಿ ಅದ್ದೂರಿಯಾಗಿ ಬರ್ತಡೇ ಆಚರಣೆ ಮಾಡಲು ದರ್ಆನ್ ನಿರ್ಧಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಆಪ್ತರಿಗಷ್ಟೇ ಅವಕಾಶಕೊಟ್ಟಿದ್ದು, ಪಾರ್ಟಿ ವೇಳೆ ಇನ್ನೇನು ಅನಾಹುತಗಳು ಮಾಡಿಕೊಳ್ತಾರೋ ಗೊತ್ತಿಲ್ಲ, ಒಂದು ವೇಳೆ ಏನಾದ್ರೂ ಅನಾಹುತ ಆದ್ರೆ ನಟ ದರ್ಶನ್ ಇದು ದೊಡ್ಡ ಅನಾಹುತ ತಂದು ಕೊಡೋದ್ರಲ್ಲಿ ಎರಡು ಮಾತಿಲ್ಲ.