ಆನೇಕಲ್:- ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ರೌಡಿ ಶೀಟರ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಮೊಟ್ಟೆ ಏಟಿಗೆ ತಲೆ ಪೆಟ್ಟು: ಆಸ್ಪತ್ರೆಯಿಂದ ಬಿಜೆಪಿ ಶಾಸಕ ಮುನಿರತ್ನ ಡಿಸ್ಚಾರ್ಜ್!
ಅತ್ತಿಬೆಲೆ ಪೊಲೀಸರಿಂದ ರೌಡಿ ಶೀಟರ್ ಸುನೀಲ್ @ ಹಾವೇರಿ ಬಂಧಿಸಲಾಗಿದೆ. ಅತ್ತಿಬೆಲೆ ಸಮೀಪದ ಬಂಡಾಪುರ ಬಳಿ ಅತ್ತಿಬೆಲೆ ಇನ್ಸ್ಪೆಕ್ಟರ್ ರಾಘವ್ ಗೌಡ ಅವರು ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ. ತಿಂಗಳ ಹಿಂದೆ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ಅರೆಸ್ಟ್ ಮಾಡಲಾಗಿದೆ.
ಆರೋಪಿ ಸುನೀಲ್ ನ ಹುಡುಕಾಟಗಲ್ಲಿ ಪೊಲೀಸರು ಇದ್ದರು. ಈ ವೇಳೆ ಬಂಡಾಪುರ ಬಳಿ ಆರೋಪಿ ಇರುವಿಕೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸ್ಥಳಕ್ಕೆ ತೆರಳಿದಾಗ ಪೊಲೀಸರ ಕಂಡು ಎಸ್ಕೇಪ್ ಆಗಲು ಆರೋಪಿ ಸುನಿಲ್ ಯತ್ನ ನಡೆದಿದೆ. ಈ ವೇಳೆ ಅಡ್ಡಗಟ್ಟಿ ಕಾನ್ಸ್ಟೇಬಲ್ ವಿನಯ್ ತಡೆದಿದ್ದಾರೆ. ವಿನಯ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆದಿದೆ.
ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ವಾರ್ನಿಂಗ್ ಕೊಡಲಾಗಿತ್ತು. ಇದಕ್ಕೆ ಬಗ್ಗದ ಆರೋಪಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮುಂದುವರಿಸಲು ಮುಂದಾದ. ಈ ವೇಳೆ ಫೈರಿಂಗ್ ಮಾಡಲಾಗಿದೆ.
ಆರೋಪಿ ಸುನೀಲ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.