ಬೆಂಗಳೂರು ರಾಜಗೋಪಾಲನಗರ ಪೊಲೀಸ್ರು ಅಪರಾಧ ತಡೆ ಮಾಸ ದಿನಚಾರಣೆಯನ್ನಾಗಿ ಆಚರಣೆ ಮಾಡ್ತಾರೆ. ಈ ಹಿನ್ನಲೆ ಇಂದು ಸರ್ಕಾರಿ ಶಾಲೆ ಮಕ್ಕಳೊಂದಿಗೆ ಇಂದು ರಸ್ತೆ ಗಳಲ್ಲಿ ಅಭಿಯಾನ ನಡೆಸಿದ್ರು.ರಾಜಗೋಪಲನಗರ ಸಬ್ ಇನ್ಸ್ಪೆಕ್ಟರ್ ಮುರಳಿ ಮಕ್ಕಳೊಂದಿಗೆ ರಾಜಗೋಪಾಲನಗರದ ಬೀದಿಗಳಲ್ಲಿ ಅಪರಾಧ ಕುರಿತಂತೆ ಬಿತ್ತಿ ಪತ್ರಗಳನ್ನ ಹಿಡಿದು ಜಾಗೃತಿ ಭಾಷಣ ಮಾಡುತ್ತಾ ಅಭಿಯಾನ ನಡೆಸಿದ್ರು.
ನಿಮಗೆ ಅರಿವಿಲ್ಲದೆ PAN Card ದುರ್ಬಳಕೆ ಆಗಿರಬಹುದು ಎಂಬ ಅನುಮಾನವಿದ್ದರೆ ಹೀಗೆ ಮಾಡಿ ಸಾಕು..! ನಿಮ್ಮ ಕಾರ್ಡ್ ಸೇಫ್
ಇಷ್ಟೆ ಅಲ್ಲದೆ ನಗರದಲ್ಲಿ ಸರಗಳ್ಳರಿಂದ ಬಚಾವ್ ಆಗಲು ಏನು ಮಾಡಬೇಕು, ಮನೆಗಳ್ಳತ ಬಗ್ಗೆ ಯಾವರೀತಿ ಎಚ್ಚರ ವಹಿಸಬೇಕು ಎಂದು ಬೀದಿ ನಾಟಕಗಳನ್ನ ಪ್ರದರ್ಶನ ಮಾಡಿದ್ರು. ಜೊತೆಗೆ ಶಾಲ ಮಕ್ಕಳಲ್ಲಿ ಅಪರಾಧ ಕುರಿತಂತೆ ಪ್ರಬಂಧ ಸ್ಪರ್ಧೆ ಕೂಡ ನಡೆಸಿ ಅಪರಾಧ ತಡೆ ಮಾಸವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.