ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅತ್ಯಂತ ಶಾಂತಿಯುತವಾಗಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ಹುಬ್ಬಳ್ಳಿಯ ಜನತಾ ಬಜಾರ್ ಬೀದಿ ಬದಿಯ ವ್ಯಾಪಾರಸ್ಥರ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.
ಸಂಘದ ಅಧ್ಯಕ್ಷರಾದ ನಿರ್ಮಲಾ ಹಂಜಿ, ಪ್ರಮುಖರಾದ ಸೋಮಣ್ಣ ಹಂಜಿ ಮುಂತಾದವರು ಹೂಹಾರ ಹಾಕಿ, ಶಾಲು ಹೊದಿಸಿ ಸತ್ಕಾರ ಮಾಡಿ ಮಾತನಾಡಿದರು. ಹುಬ್ಬಳ್ಳಿಯ ಇತಿಹಾಸದಲ್ಲಿಯೇ ಎರಡು ಹಬ್ಬಗಳು ಅತ್ಯಂತ ಶಾಂತಿಯುತ ಆಚರಣೆ ಮಾಡಲಾಗಿದೆ.
ಈದ್ ಮಿಲಾದ್, ಗಣೇಶೋತ್ಸವ ಆಚರಣೆ ಹುಬ್ಬಳ್ಳಿ ಮಾದರಿ ಆಗಿದ್ದು ಇದರಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಪಾತ್ರ ಪ್ರಮುಖವಾಗಿದೆ. ಸಾಕಷ್ಟು ಭದ್ರತೆ ಕೈಗೊಂಡಿದ್ದ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಆಚರಣೆ ಮಾಡಲಾಯಿತು.ಇದೊಂದು ವೃತ್ತಿಪರತೆ ಹಾಗೂ ಕರ್ತವ್ಯಕ್ಕೆ ಸಾಕ್ಷಿ ಆಗಿದೆ ಎಂದು ಸೋಮಣ್ಣ ಹಂಜಿ ಹರ್ಷ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ಕಾಂಗ್ರೆಸ್ ಸಮಿತಿ, ಎಪಿಎಂಸಿ ಪದಾಧಿಕಾರಿಗಳು, ದಲಿತ ಪರ ಸಂಘಟನೆಗಳಿಂದ ಪದಾಧಿಕಾರಿಗಳಿಂದ ಸನ್ಮಾನ ಮಾಡಲಾಯಿತು.