ಬೆಂಗಳೂರು: ನಾನು ನಾಳೆ ದೆಹಲಿಗೆ ಹೋಗ್ತಾ ಇದೀನಿ. ಪ್ರಧಾನಿ ಮೋದಿ ಭೇಟಿಗೆ ಕಾಲಾವಕಾಶ ಕೇಳಿದ್ದೆ ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ. ಬೆಳಗ್ಗೆ 11 ಗಂಟೆಗೆ ಸಂಸತ್ನಲ್ಲಿ ಮೋದಿ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ.
ಬರಗಾಲದ ಬಗ್ಗೆ ಪ್ರಧಾನಿಗಳ ಜೊತೆ ಚರ್ಚೆ ಮಾಡ್ತೀನಿ ಪಿಎಂ ಜೊತೆ ಸಮಯ ಕೇಳಿದ್ದೇ ಬರಗಾಲದ ಬಗ್ಗೆ ಚರ್ಚೆ ಮಾಡಲು.. ಜೊತೆಗೆ ಕಾಂಗ್ರೆಸ್ ವರ್ಕಿಂಗ್ ಕಿಮಿಟಿ ಮೀಟಿಂಗ್ ಇದೆ ಅದಕ್ಕೂ ಅಟೆಂಡ್ ಮಾಡ್ತೀನಿ ಜೊತೆಗೆ ಲೋಕಸಭಾ ಚುನಾವಣೆ ಬಗ್ಗೆಯೂ ಚರ್ಚೆ ಮಾಡ್ತೀನಿ..ಹೈಕಮಾಂಡ್ ಜೊತೆ ನಿಗಮ ಮಂಡಳಿದು ಚರ್ಚೆ ಮಾಡ್ತೀವಿ ಈಗಾಗಲೇ ಲಿಸ್ಟ್ ಕಳಿಸಲಾಗಿದೆ ಎಂದರು.
ನೆರೆ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ ವಿಚಾರ ಬಗ್ಗೆಯೂ ಆರೋಗ್ಯ ಸಚಿವರಿಗೆ ಸಭೆ ಮಾಡಲು ಹೇಳಿದ್ದೇನೆ ಮುಂಜಾಗ್ರತಾ ಕ್ರಮಗಳನ್ನ ತಗೆದುಕೊಳ್ಳಲು ಹೇಳಿದ್ದೇನೆ ಎಂದು ಹೇಳಿದರು.