ಬೆಂಗಳೂರು:-ಪ್ರಧಾನಮಂತ್ರಿ ಸೂರ್ಯ ಘರ್ ಮುಕ್ತ ವಿದ್ಯುತ್ ಯೋಜನೆಯಡಿಯಲ್ಲಿನ ಸಬ್ಸಿಡಿ ಮಾಹಿತಿಯನ್ನು ಬೆಸ್ಕಾಂ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಐದು ವರ್ಷ ಪಾವತಿಯನ್ನು ಮಾಡಿ, ಇಪ್ಪತ್ತು ವರ್ಷ ಯಾವುದೇ ಹಣ ಪಾವತಿಸದೇ, ವಿದ್ಯುತ್ ಅನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.
5 ವರ್ಷ ಪಾವತಿಯನ್ನು ಮಾಡಿ, 20 ವರ್ಷ ಯಾವುದೇ ಹಣ ಪಾವತಿಸದೇ, ವಿದ್ಯುತ್ ಅನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ರೂಫ್ ಟಾಪ್ ಸೋಲಾರ್ ಪ್ಲ್ಯಾಂಟ್ ಹಾಕಿಸಿಕೊಳ್ಳಲು ತಗಲುವ ಖರ್ಚು ಮತ್ತು ಅದರಿಂದಾಗುವ ಉಳಿತಾಯದ ಬಗ್ಗೆಯೂ ಬೆಸ್ಕಾಂ ವಿವರಣೆಯನ್ನು ನೀಡಿದೆ. ಇದಕ್ಕೆ ವಾರ್ಷಿಕ 7% ನಲ್ಲಿ ಬ್ಯಾಂಕ್ ಲೋನ್ ಕೂಡಾ ಲಭ್ಯವಿದೆ. ಹತ್ತು ವರ್ಷದವರೆಗೆ ಇಎಂಐ ಕಟ್ಟುವ ಅವಕಾಶವೂ ಇದೆ ಎಂದು ಬೆಸ್ಕಾಂ ತನ್ನ ಎಕ್ಸ್ ಅಕೌಂಟ್ ನಲ್ಲಿ ಮಾಹಿತಿ ನೀಡಿದೆ.
ಒಂದು ಕಿಲೋವ್ಯಾಟ್ ಸೋಲಾರ್ ಫಲಕ ಹಾಕಲು 10 X 10 ಜಾಗ ಸಾಕು ಮತ್ತು ಪ್ಲ್ಯಾಂಟಿನ ಮೊತ್ತ ಐದು ವರ್ಷದ ನಿರ್ವಹಣಾ ವೆಚ್ಚವೂ ಒಳಗೊಂಡಂತೆ ಸೇರಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ. ಲೇಟೆಸ್ಟ್ ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡಿನ ಕಾಪಿಯೊಂದಿಗೆ ಇದಕ್ಕೆ ಅರ್ಜಿ ಸಲ್ಲಿಸಬಹುದು.
ಮನೆಬಳಕೆಯ ನಂತರ ಉಳಿಯುವ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ, ತಿಂಗಳು ತಿಂಗಳು ಹಣವನ್ನೂ ಸಹ ಸಂಪಾದಿಸಬಹುದು ಎಂದು ಬೆಸ್ಕಾಂ ಹೇಳಿದೆ. 1, 2 ಮತ್ತು 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲ್ಯಾಂಟ್ ಅಳವಡಿಸಬಹುದಾಗಿದೆ.
ಸಬ್ಸಿಡಿ ಮೊತ್ತದ ವಿವರ ಹೀಗಿದೆ :
1ಕಿಲೋವ್ಯಾಟ್ : 30 ಸಾವಿರ ರೂಪಾಯಿ.
2ಕಿಲೋವ್ಯಾಟ್ : 60 ಸಾವಿರ ರೂಪಾಯಿ.
3 ಕಿಲೋವ್ಯಾಟ್ : 78 ಸಾವಿರ ರೂಪಾಯಿ.
ವಸತಿ ಸಮುಚ್ಚಯಗಳಿಗಾದರೆ, 500 ಕಿಲೋವ್ಯಾಟ್ ವರೆಗಿನ ಸಾಮರ್ಥ್ಯದ ಪ್ಲ್ಯಾಂಟಿಗೆ 18 ಸಾವಿರ ರೂಪಾಯಿ ಸಬ್ಸಿಡಿ.
101 – 200 ಯುನಿಟ್ ಬಳಕೆಯಾಗುತ್ತಿದ್ದರೆ, 1 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 60 ರಿಂದ 80 ಸಾವಿರ ರೂಪಾಯಿ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 9,600 ರೂಪಾಯಿ.
101 – 200 ಯುನಿಟ್ ಬಳಕೆಯಾಗುತ್ತಿದ್ದರೆ, 2 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 1.2 ಲಕ್ಷದಿಂದ 1.6ಲಕ್ಷದವರೆಗೆ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 21,600 ರೂಪಾಯಿ.
201 – 300 ಯುನಿಟ್ ಬಳಕೆಯಾಗುತ್ತಿದ್ದರೆ, 3 ಕಿಲೋವ್ಯಾಟ್ ಸೋಲಾರ್ ಪ್ಲ್ಯಾಂಟ್ ಹಾಕಿಕೊಂಡರೆ, ಅದರ ವೆಚ್ಚ 1.8 ಲಕ್ಷದಿಂದ 2.4 ಲಕ್ಷದವರೆಗೆ, ಇದರಿಂದ ವಾರ್ಷಿಕ ಉಳಿತಾಯದ ಮೊತ್ತ 36,000 ರೂಪಾಯಿ.
ಇದರ ಪ್ರಯೋಜನೆಗಳೇನು?
ವಿದ್ಯುತ್ ಬಿಲ್ನಲ್ಲಿ ಉಳಿತಾಯ
ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು.
ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆ
ಈ ವ್ಯವಸ್ಥೆ ಪಡೆಯಲು ಬೇಕಿರುವ ದಾಖಲೆಗಳು ವಿದ್ಯುತ್ ಬಿಲ್ ಮತ್ತು ಆಧಾರ್ ಕಾರ್ಡ್ ಮಾತ್ರ.
ಅರ್ಜಿ ಸಲ್ಲಿಕೆ ಹೇಗೆ?
ಇದಕ್ಕೆ ಯಾರೂ ಬೇಕಾದರೂ ಅರ್ಜಿ ಸಲ್ಲಿಕೆ ಮಾಡಬಹುದು. ಸಬ್ಸಿಡಿ ಪಡೆಯಲು ಗರಿಷ್ಠ ಪೇಲೋಡ್ ಶೇಕಡಾ 85 ರಷ್ಟು ಮೀರಿರಬಾರದು ಅಷ್ಟೇ. ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಅಧಿಕೃತ ಪಿಎಂ ಘರ್ ಮುಕ್ತ್ ಬಿಜಿಲಿ ಯೋಜನೆ ಅಧಿಕೃತ ವೆಬ್ಸೈಟ್(https://www.pmsuryaghar.gov.in/) ಮೂಲಕ ಸುಲಭವಾಗಿ ಸಲ್ಲಿಕೆ ಮಾಡಬಹುದು.
ಯೋಜನೆ ಲಾಭ ಪಡೆಯಲು ಬಯಸಿದವರು ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ ಕೆಲ ಅಗತ್ಯ ಮಾಹಿತಿ ಹಾಗೂ ದಾಖಲೆ ಸಲ್ಲಿಸಬೇಕು. ಪ್ರಮುಖವಾಗಿ ವಿದ್ಯುತ್ ಗ್ರಾಹಕರ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್, ವಿದ್ಯುತ್ ವಿತರಣಾ ಕಂಪನಿ ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಿ ರೂಫ್ ಟಾಪ್ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು.