ನವದೆಹಲಿ: ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ. ಅದಕ್ಕಾಗಿ ಸ್ವಚ್ಛ ಭಾರತ್ ಮಿಷನ್ನ್ನು ಬಲಪಡಿಸುವುದನ್ನು ಮುಂದುವರಿಸಿ ಎಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಹಾತ್ಮ ಗಾಂಧಿಯವರ 155ನೇ ಜಯಂತಿಯ ಅಂಗವಾಗಿ ದೆಹಲಿಯ ಗಾಂಧಿ ಸ್ಮಾರಕಕ್ಕೆ ಅವರು ಗೌರವ ಸಲ್ಲಿಸಿದರು. ಬಳಿಕ ಅವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು,
2014 ರಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನವಾದ ಸ್ವಚ್ಛ ಭಾರತ್ ಮಿಷನ್ನ 10 ವರ್ಷಗಳನ್ನ ಪೂರೈಸಿದೆ. ಈ ಮಹತ್ವದ ದಿನವನ್ನು ಆಚರಿಸಲು ಶಾಲಾ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ನಾಗರಿಕರು ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
Tamarind Seed Benefits: ಹುಣಸೆ ಬೀಜದ ಆರೋಗ್ಯಕಾರಿ ಪ್ರಯೋಜನಗಳು ಒಂದೇ ಎರಡೇ..? ಇಲ್ಲಿದೆ ನೋಡಿ
ಸ್ವಚ್ಛ ಭಾರತವು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಜನರ ಅತ್ಯಂತ ಯಶಸ್ವಿ ಸಂಕಲ್ಪವಾಗಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಜನರು ವಹಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನವು ಕೇವಲ ಸ್ವಚ್ಛತಾ ಆಂದೋಲನವಲ್ಲ. ಇದು ಈಗ ಸಮೃದ್ಧಿಯ ಹೊಸ ಹಾದಿಯಾಗುತ್ತಿದೆ ಎಂದಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಖರ್ ರಾಜ್ಘಾಟ್ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.