ಕೋಲ್ಕತ್ತಾದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ,ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾದ ಈ ಸುರಂಗವು ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ನ ಭಾಗವಾಗಿದ್ದು ಇದೇ ಮಾರ್ಚ್ 6ರಂದು ಮೋದಿ ಚಾಲನೆ ನೀಡಲಿದ್ದಾರೆ.
ಈ ಮೆಟ್ರೋ ಹೌರಾ ಮೈದಾನದಿಂದ ಎಸ್ಪ್ಲೇನೇಡ್ಗೆ ಸಂಪರ್ಕಿಸುತ್ತದೆ ಎಂದು ಹೇಳಲಾಗುತ್ತಿದೆ. ಅದೇ ದಿನ ಕೋಲ್ಕತ್ತಾ ಮೆಟ್ರೋದ ಕವಿ ಸುಭಾಷ್-ಹೇಮಂತ ಮುಖೋಪಾಧ್ಯಾಯ ಮತ್ತು ತಾರಾತಲಾ-ಮಜೆರ್ಹತ್ ವಿಭಾಗಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ವಿಭಾಗಗಳು ರಸ್ತೆ ದಟ್ಟಣೆಯನ್ನು ನಿವಾರಿಸಲು ಮತ್ತು ತಡೆರಹಿತ, ಸುಲಭ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿವೆ.
ಹೌರಾ ಮೈದಾನ್-ಎಸ್ಪ್ಲಾನೇಡ್ ಮೆಟ್ರೋ ಮಾರ್ಗವು ಭಾರತದ ಯಾವುದೇ ಪ್ರಬಲ ನದಿಯ ಅಡಿಯಲ್ಲಿ ಮೊದಲ ಸಾರಿಗೆ ಸುರಂಗವನ್ನು ಹೊಂದಿದೆ. ಹೌರಾ ಮೆಟ್ರೋ ನಿಲ್ದಾಣವು ದೇಶದಲ್ಲೇ ಅತ್ಯಂತ ಆಳವಾದುದ್ದಾಗಿದ್ದು 33-ಮೀಟರ್ ಮೇಲ್ಮೈ ಹೊಂದಿದೆ ಎನ್ನಲಾಗಿದೆ. ಮೆಟ್ರೋ 45 ಸೆಕೆಂಡುಗಳಲ್ಲಿ ಹೂಗ್ಲಿ ನದಿಯ ಅಡಿಯಲ್ಲಿ 520-ಮೀಟರ್ ವ್ಯಾಪ್ತಿಯನ್ನು ಕ್ರಮಿಸುವ ನಿರೀಕ್ಷೆಯಿದೆ.
ಮಜೆರ್ಹತ್ ಮೆಟ್ರೋ ನಿಲ್ದಾಣವು ವಿಶಿಷ್ಟವಾಗಿ ಎತ್ತರಿಸಿದ ಮೆಟ್ರೋ ನಿಲ್ದಾಣವಾಗಿದ್ದು, ಇದು ಕಾಲುವೆಯನ್ನು ಸಹ ಒಳಗೊಂಡಿರುತ್ತದೆ. ‘ಪ್ರಧಾನಿ ಮೋದಿ ಅವರು ಕೋಲ್ಕತ್ತಾದ ಜನರಿಗೆ ನೀಡಿದ ಉಡುಗೊರೆ ಇದಾಗಿದೆ. ಈ ಉದ್ಘಾಟನೆಯೊಂದಿಗೆ ಬಹುಕಾಲದ ಕನಸು ನನಸಾಗಲಿದೆ’ ಎಂದು ಕೋಲ್ಕತ್ತಾ ಮೆಟ್ರೋ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಸಿಕ್ ಮಿತ್ರಾ ತಿಳಿಸಿದ್ದಾರೆ.