ಬೆಂಗಳೂರು;- ಬಿಜೆಪಿಯವರಿಗೆ ರೈತರ ಮೇಲೆ ಗೌರವ, ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹಳ್ಳಿಗಾಡಿನ ಜನರ ಮೇಲೆ ಪ್ರೀತಿ, ರೈತರ ಮೇಲೆ ಗೌರವ ಹಾಗೂ ಕರ್ನಾಟಕದ ಮೇಲೆ ಕಾಳಜಿ ಇದ್ದರೆ, ಮೊದಲು ಕೇಂದ್ರದಿಂದ ಪರಿಹಾರ ಕೊಡಿಸಲಿ” ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬರ ಅಧ್ಯಯನಕ್ಕೆ ತಿರುಗೇಟು ನೀಡಿದ್ದಾರೆ
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಕೇಂದ್ರದ ತಂಡ ಅಧ್ಯಯನ ಮಾಡಿಕೊಂಡು ಹೋಗಿದೆ, ಇನ್ನೂ ಕೂಡ ವರದಿ ಕೊಟ್ಟಿಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕಾಗಿ ಹೋಗ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರದ ಬಳಿ ಕುಳಿತು ದುಡ್ಡು ಕೊಡಿಸಲಿ. ಕೇಂದ್ರ ಸರ್ಕಾರದ ಅಧ್ಯಯನ ಮಾಡಿದೆ. ಇವರೇನು ಅಧ್ಯಯನ ಮಾಡೋಡು” ಎಂದು ಟೀಕಿಸಿದರು.
ನಾವೇ ಅಧ್ಯಯನ ಮಾಡಿದ್ದೀವಲ್ಲ. ಮಾಡಲಿ ನಮ್ಮದೇನು ತಕರಾರು ಇಲ್ಲ. ಮಾಡಬಾರದು ಅಂತಾನೂ ನಾವು ಹೇಳೋಕೆ ಹೋಗಲ್ಲ. ನಾವು ಕಳುಹಿಸಿ ತುಂಬಾ ದಿನ ಆಯ್ತು, ಸೆಂಟ್ರಲ್ ಟೀಂ ಹೋಗಿ ತುಂಬಾ ದಿನ ಆಯ್ತು ಇನ್ನೂ ವರದಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. 17,900 ಕೋಟಿಯಷ್ಟು ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ. ಅದನ್ನು ಮೊದಲು ಕೊಡಿಸಲಿ” ಎಂದು ಕಿಡಿಕಾರಿದ್ದಾರೆ.
25 ಜನ ಬಿಜೆಪಿ ಎಂಪಿಗಳಿದ್ದಾರಲ್ಲ ಕುಳಿತು ಮಾತನಾಡಿ ಕೊಡಿಸಲಿ. ನಮ್ಮ ಮಂತ್ರಿಗಳಿಗೆ ಕೇಂದ್ರದ ಸಚಿವರು ಭೇಟಿ ಮಾಡಲು ಸಮಯನೇ ಕೊಟ್ಟಿಲ್ಲ. ದೆಹಲಿಗೆ ಹೋದ್ರು ಸಮಯ ಕೊಟ್ಟಿಲ್ಲ. ಅವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ” ಎಂದು ಪ್ರಶ್ನಿಸಿದರು.