ನವದೆಹಲಿ: ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿನ್ನಬಹುದು, ಆದ್ರೆ ಟೀಂ ಇಂಡಿಯಾ ಹೋಗ್ಬಾರ್ದಾ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ ನವಾಬ್ ಷರೀಫ್ ಜೊತೆ ಬಿರಿಯಾನಿ ಸವಿದಿದ್ದರು. ಅದು ತಪ್ಪಲ್ಲ ಎಂದಮೇಲೆ ಇದೀಗ ಭಾರತ ಕ್ರಿಕೆಟ್ ಟೀಂ ಪಾಕ್ಗೆ ತೆರಳುವುದು ಕೂಡ ತಪ್ಪಲ್ಲ ಎಂದು ಹೇಳಿದ್ದಾರೆ.
ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ
ಕ್ರೀಡೆಯಲ್ಲಿ ರಾಜಕೀಯವನ್ನು ತೊಡಗಿಸಿಕೊಳ್ಳುವುದು ಒಳ್ಳೆಯದಲ್ಲ. ಎಲ್ಲರೂ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದಿಲ್ಲವೇ? ಭಾರತ ಏಕೆ ಪಾಕಿಸ್ತಾನಕ್ಕೆ ಹೋಗಬಾರದು? ಪ್ರಧಾನಿಯವರು ಬಿರಿಯಾನಿ ತಿನ್ನಲು ಪಾಕ್ಗೆ ಹೋಗಬಹುದಾದರೆ, ಭಾರತ ಕ್ರಿಕೆಟ್ ತಂಡವು ಪಂದ್ಯಾವಳಿಗೆ ಏಕೆ ಪ್ರಯಾಣಿಸಬಾರದು? ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.