ಬೆಳಗಾವಿ:- ರಾಜ್ಯದಲ್ಲಿ ಸಿಲಿಂಡರ್ ಗ್ಯಾಸ್ ಸ್ಪೋಟವಾಗಿ ಅನಾಹುತಗಳು ನಡೆದು ಯಾವ ರೀತಿ ಜೀವ ಹಾನಿಗಳು ನಡೆಯುತ್ತಿವೆ ಎಂಬುದನ್ನು ನಾವೆಲ್ಲ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡುತ್ತಿದ್ದೇವೆ.
ಅದರಂತೆ ಬೆಳಗಾವಿ ಜಿಲ್ಲೆಯ ಕಾಗವಾಡ ವ್ಯಾಪ್ತಿಯ ಸಂಬರಗಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂಬರ್ ೧ ರಲ್ಲಿ ಮತ್ತೆ ಗ್ಯಾಸ ಒಲೆ ಉರಿಯುತ್ತಿರುವಾಗಲೇ ದೊಡ್ಡ ಗಾತ್ರದ ಬೆಂಕಿ ಕಾಣಿಸಿಕೊಂಡು ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆದುಕೊಂಡು ಹೊರಗಡೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಹಿಂದೆಯು ಗ್ಯಾಸ್ ಸೋರಿಕೆಯಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ ಆದರೂ ಸಹ ಎಚ್ಚೆತ್ತುಕೊಳ್ಳದ ಅಂಗನವಾಡಿ ಸಿಬ್ಬಂದಿಗಳ ವಿರುದ್ಧ ಪೊಷಕರು ಆಕ್ರೋಶಗೊಂಡಿದ್ದಾರೆ, ಮಕ್ಕಳಿಗೆ ಸರಿಯಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿ ಮಾಯವಾಗಿದ್ದು, ಈ ರೀತಿ ಬೇಜವಾಬ್ದಾರಿ ತೋರಿ, ಏನಾದರೂ ಅವಘಡ ಸಂಭವಿಸಿದರೆ ನಮ್ಮ ಮಕ್ಕಳನ್ನು ಯಾರ ಜವಾಬ್ದಾರಿ ಮೇಲೆ ಶಾಲೆಗೆ ಕಳುಹಿಸಬೇಕು ಎಂದು ಪೋಷಕವರ್ಗದವರಲ್ಲಿ ಆತಂಕ ಹುಟ್ಟಿಸಿದೆ.
ಒಟ್ಟಾರೆ ಮೇಲಾಧಿಕಾರಿಗಳು ಗ್ಯಾಸ್ ಸಮಸ್ಯೆ ಪರಿಶೀಲಿಸಿ ಈ ರೀತಿಯ ಬೇಜವಾಬ್ದಾರಿ ಧೋರಣೆ ತೋರಿ ಪುಟ್ಟ ಮಕ್ಕಳ ಜೀವದ ಜೊತೆ ಚೆಲ್ಲಾಟ ವಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.