ಬಿಗ್ ಬಾಸ್ ಸೀಸನ್ 11 ನಾಲ್ಕನೇ ವಾರ ಶುರುವಾಗಿದೆ. ಇದೀಗ ಎಲಿಮಿನೇಷನ್ ಪ್ರಕ್ರಿಯೆಯೂ ಶುರುವಾಗಿದೆ. ಹೀಗಾಗಿ ಬಿಗ್ ಬಾಸ್ ಕೆಲವೊಂದು ಟಾಸ್ಕ್ ಕೊಟ್ಟಿದೆ. ಆ ಟಾಸ್ಕ್ ನಲ್ಲಿ ಮನೆ ಮಂದಿ ಅತಿರೇಕದಿಂದ ವರ್ತಿಸಿದ್ದಾರೆ.
ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ.
ಅನುಷಾ ರೈ ಅವರು ಟಾಸ್ಕ್ ಮಾಡುವಾಗ ಅವರ ಗಮನವನ್ನು ಕಡಿಸಲು ಹಲವು ಬಗೆಯ ಪ್ರಯತ್ನ ಮಾಡಲಾಗಿದೆ. ಮೈಗೆ, ಮುಖಕ್ಕೆ ನೀರು ಎರೆಚಲಾಗಿದೆ. ಅಷ್ಟೇ ಅಲ್ಲದೇ ದಿಂಬಿನಿಂದ ಹೊಡೆದು ಬೀಳಿಸಲಾಗಿದೆ. ಬೆನ್ನು ಮೂಳೆಗೆ ಪೆಟ್ಟಾಗುವ ರೀತಿಯಲ್ಲಿ ಅನುಷಾ ಅವರನ್ನು ಹೊಡೆದು ಬೀಳಿಸಿದ್ದಕ್ಕೆ ಭವ್ಯಾ ಗೌಡ ಖಂಡನೆ ವ್ಯಕ್ತಪಡಿಸಿದ್ದಾರೆ.
ಒಂದು ಸುತ್ತಿನ ಆಟ ಮುಗಿಯುವ ವೇಳೆಗಾಗಲೇ ಅನುಷಾ ರೈ ಅವರಿಗೆ ಪೆಟ್ಟಾಗಿತ್ತು. ಹಾಗಿದ್ದರೂ ಕೂಡ ಅವರು ಟಾಸ್ಕ್ ಅನ್ನು ಬಿಟ್ಟುಕೊಡಬಾರದು ಎಂಬ ಕಾರಣದಿಂದ ಆಟ ಮುಂದುವರಿಸಿದರು. ಈಗಾಗಲೇ ಅವರಿಗೆ ನೋವಾಗಿದೆ ಎಂಬುದು ಗೊತ್ತಿದ್ದರೂ ಕೂಡ ಗೋಲ್ಡ್ ಸುರೇಶ್, ಶಿಶಿರ್, ತ್ರಿವಿಕ್ರಮ್ ಅವರು ಜೋರಾಗಿ ಹೊಡೆದಿದ್ದಾರೆ. ಅನುಷಾ ರೈ ಕೆಳಗೆ ಬಿದ್ದಾಗ ಮೋಕ್ಷಿತಾ ಪೈ, ಗೌತಮಿ ಜಾಧವ್ ಅವರು ಕಣ್ಣೀರು ಹಾಕಿದ್ದಾರೆ.
ಈ ಹೊಡೆದಾಟ ಆಗಿದ್ದರ ಬಗ್ಗೆ ಟಾಸ್ಕ್ ಮುಗಿದ ಬಳಿಕ ಭವ್ಯಾ ಗೌಡ ಅವರು ಚರ್ಚೆ ಮಾಡಿದ್ದಾರೆ. ಹುಡುಗಿಯರನ್ನು ಟಾರ್ಗೆಟ್ ಮಾಡಿ ಹೊಡೆದಿದ್ದು ಯಾಕೆ ಎಂದು ಅವರು ಹೇಳಿದ್ದಾರೆ. ಅವರ ಮಾತನ್ನು ತ್ರಿವಿಕ್ರಮ್, ಉಗ್ರಂ ಮಂಜು, ಶಿಶಿರ್ ಮುಂತಾದವರು ವಿರೋಧಿಸಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್ ಸಲುವಾಗಿ ಇಷ್ಟೆಲ್ಲ ಹೊಡೆದಾಟ ನಡೆಯುತ್ತಿದೆ. ಅನುಷಾ ರೈ ಅವರು ಟಾಸ್ಕ್ ಬಳಿಕ ಜೋರಾಗಿ ಅತ್ತಿದ್ದಾರೆ.
ಒಬ್ಬ ವ್ಯಕ್ತಿಗೆ ಆ ರೀತಿ ಹೊಡೆದಾಗ ತುಂಬ ನೋವಾಗುತ್ತದೆ. ಅದರ ಅರಿವು ಇದ್ದರೂ ಕೂಡ ಹೊಡೆದಿದ್ದಾರೆ’ ಎಂದು ಮೋಕ್ಷಿತಾ ಪೈ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪೆಟ್ಟಾಗುತ್ತದೆ ಎಂಬುದು ಗೊತ್ತಿದ್ದೇ ತಾವು ಹೊಡೆದಿದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತಿನಿಂದ ಮೋಕ್ಷಿತಾ ಹಾಗೂ ಗೌತಮಿ ಅವರಿಗೆ ನೋವಾಗಿದೆ.