ಆಂಧ್ರಪ್ರದೇಶ:- ಇಲ್ಲಿನ ತಿರುಮಲದ ತಿಮ್ಮಪ್ಪನ ದೇವಾಲಯದ ಮೇಲೆ ಸಾಮಾನ್ಯವಾಗಿ ಯಾವುದೇ ವಿಮಾನಗಳು ಹಾರಾಡುವುದಿಲ್ಲ. ವಿಮಾನ ಹಾರಾಟವು ಆಗಮ ಶಾಸ್ತ್ರಕ್ಕೆ ವಿರುದ್ಧವಾದದ್ದು. ಹೀಗಾಗಿ ತಲ, ತಲಾಂತರಗಳಿಂದ ತಿಮ್ಮಪ್ಪನ ದೇಗುಲದ ಮೇಲೆ ವಿಮಾನ ಹಾರಾಡುವುದನ್ನ ಭಕ್ತರು ವಿರೋಧಿಸುತ್ತಾ ಬಂದಿದ್ದಾರೆ.
ಸ್ಮೃತಿ ಪಡೆಗೆ ಸೋಲಿನ ರುಚಿ ತೋರಿದ MI: ಆರ್ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ ಮುಂಬೈ!
ಇದೀಗ ಸಂಪ್ರದಾಯವನ್ನು ಉಲ್ಲಂಘಿಸಿ ತಿಮ್ಮಪ್ಪ ದೇವಾಲಯದ ಮೇಲೆ ಮತ್ತೊಮ್ಮೆ ವಿಮಾನ ಹಾರಾಟ ಮಾಡಿದೆ. ಇದು ತಿಮ್ಮಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಆಕ್ರೋಶ ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಭಕ್ತರು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ತಕ್ಷಣವೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲು ಆಗ್ರಹಿಸಿದ್ದಾರೆ.
ಸದ್ಯ ಮೋದಿ ಸರ್ಕಾರದಲ್ಲಿ ಆಂಧ್ರದ ಟಿಡಿಪಿ ಪಕ್ಷದ ರಾಮ ಮೋಹನ್ ನಾಯ್ಡು ಅವರೇ ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದಾರೆ. ಹೀಗಾಗಿ ತಿರುಮಲವನ್ನು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಯಿಂದ ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲು ಒತ್ತಡ ಏರಲಾಗುತ್ತಿದೆ.
ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟದಿಂದ ಭಕ್ತರ ಭಾವನೆಗೆ ಧಕ್ಕೆಯಾಗುತ್ತದೆ. ಇಷ್ಟು ದಿನ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ವಿಮಾನ ಹಾರಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದೀಗ ಸದ್ದಿಲ್ಲದೇ ವಿಮಾನ ಹಾರಾಟ ನಡೆಸಿರೋದನ್ನು ತಿಮ್ಮಪ್ಪನ ಭಕ್ತರು ಖಂಡಿಸಿದ್ದಾರೆ