ಜನ ವಸತಿ ಪ್ರದೇಶದಲ್ಲೇ ವಿಮಾನ ಪತನ ಒಟ್ಟು 62 ಜನರ ಸಾವನ್ನಪ್ಪಿದ ಘಟನೆ ಬ್ರೆಜಿಲ್ ನಲ್ಲಿ ಜರುಗಿದೆ.
Good News: ಕೇಂದ್ರದಿಂದ ಬಡವರಿಗೆ ಸಿಹಿ ಸುದ್ದಿ: 1 ಕೋಟಿ ಮನೆ ನಿರ್ಮಾಣಕ್ಕೆ ಅಸ್ತು!
ಏರ್ಲೈನ್ ವೊಪಾಸ್ ಲಿನ್ಹಾಸ್ ಏರಿಯಾಸ್ ನಿರ್ವಹಿಸುತ್ತಿದ್ದ ATR-72 ಟರ್ಬೊಪ್ರೊಪ್ ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್ಗೆ ತೆರಳುತ್ತಿತ್ತು. ಆದರೆ, ಮಾರ್ಗ ಮಧ್ಯೆ ಸಾವೊ ಪಾಲೊ ನಗರದ ಜನವಸತಿ ಪ್ರದೇಶದಲ್ಲೇ ಪತನಗೊಂಡಿದೆ. ಅದರಲ್ಲಿದ್ದ 62 ಜನ ಸಾವನ್ನಪ್ಪಿದ್ದಾರೆ .
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸಾವೊ ಪಾಲೊದ ರಾಜ್ಯ ಅಗ್ನಿಶಾಮಕ ದಳದ ಏಳು ತಂಡ ತೆರಳಿ ಬೆಂಕಿ ನಂದಿಸಿದೆ. 58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ದು ಸಾವೊ ಪಾಲೊದ ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ಎಂದು ಏರಲೈನ್ ವೊಪಾಸ್ ತಿಳಿಸಿದೆ. ಆದರೆ, ಅಪಘಾತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ.