ಬೆಂಗಳೂರು:- ಆರ್ಬಿಐಗೆ ನಕಲಿ ನೋಟ್ ಕೊಟ್ಟು ವಂಚಿಸುವ ಪ್ಲ್ಯಾನ್ ಮಾಡಿದ್ದ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಫ್ನಾಸ್, ನೂರುದ್ದೀನ್ ಅನ್ವರ್ ಹಾಗೂ ಪ್ರಿಯೇಶ್ ಎಂದು ತಿಳಿದು ಬಂದಿದೆ. ಆರೋಪಿಗಳು ಹಿಂದಿಯ ವೆಬ್ ಸೀರಿಸ್ ಒಂದರಲ್ಲಿ ನೋಟುಗಳನ್ನ ಮುದ್ರಿಸಿ ವಾಮಮಾರ್ಗದಲ್ಲಿ ಸರಬರಾಜು ಮಾಡುವ ಕತೆಯನ್ನು ಮೀರಿಸುವ ಹಾಗೆ ನಕಲಿ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದರು.
IAS Officers Transfer: ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ; ರಾಜ್ಯ ಸರ್ಕಾರ ಆದೇಶ!
ಅಲ್ಲದೇ ನಕಲಿ ನೋಟುಗಳನ್ನು ಆರ್ಬಿಐಗೆ ನೀಡಿ ರಾಜಾರೋಷವಾಗಿ ಚಾಲ್ತಿಗೆ ತರಲು ಪ್ರಯತ್ನಿಸಿದ್ದರು.
ಇದರಲ್ಲಿ ಸಿರಗುಪ್ಪ ಮೂಲದ ಅಬ್ದುಲ್ ಉದ್ಯಮಿ ಆಗಿದ್ದು, ಪ್ರಸೀತ್ ಅಲಿಯಾಸ್ ಪ್ರಸಿದ್ಗೆ 40 ಲಕ್ಷ ರೂ. ಮೌಲ್ಯದ ಗ್ರಾನೈಟ್ ಮಾರಾಟ ಮಾಡಿದ್ದ. ಪದೇ ಪದೇ ಹಣ ಕೇಳುತ್ತಿದ್ದ. ಅಬ್ದುಲ್ಗೆ ನನ್ನ ಹತ್ರ 2000 ರೂ. ಮುಖಬೆಲೆಯ 25 ಲಕ್ಷ ರೂ. ಹಣ ಇದೆ, ಅದನ್ನು ಆರ್ಬಿಐನಲ್ಲಿ ಎಕ್ಸ್ಚೇಂಜ್ ಮಾಡಿಸಿಕೋ ಎಂದು ಪ್ರಸಿದ್ದ್ 25 ಲಕ್ಷ ರೂ. ನಕಲಿ ನೋಟ್ ಕೊಟ್ಟಿದ್ದನಂತೆ.
ಈ ಹಣವನ್ನ ಬೆಂಗಳೂರಿನ ಆರ್ಬಿಐಗೆ ತಂದ ಅಬ್ದುಲ್, ಅಲ್ಲಿ ಮೆಷಿನ್ನಲ್ಲಿ ಹಾಕಿದಾಗ ಹಣ ಚಲಾವಣೆ ಆಗಿರಲಿಲ್ಲ. ಈ ವೇಳೆ ಅಬ್ದುಲ್ಗೆ ನೋಟಿನ ಬಗ್ಗೆ ಅನುಮಾನ ಬಂದಿದ್ದರೂ ಕೂಡ, ನೇರವಾಗಿ ಅಧಿಕಾರಿಗಳ ಬಳಿ ಹೋಗಿ ನೋಟು ಎಕ್ಸ್ ಚೇಂಜ್ ಮಾಡಲು ಕೇಳಿದ್ದಾನೆ. ಈ ವೇಳೆ ನೋಟು ಪರಿಶೀಲನೆ ಮಾಡಿದಾಗ ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ.
ಹಲಸೂರು ಗೇಟ್ ಪೊಲೀಸರು ಕಾಸರಗೋಡಿನಲ್ಲಿ 29 ಲಕ್ಷ ರೂ. ನಕಲಿ ನೋಟು, ಪ್ರಿಂಟಿಂಗ್ ಮೆಷಿನ್, ಕಚ್ಚಾ ಪೇಪರ್ ಹಾಗೂ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.