ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಈಗಾಗಲೇ ಶುರುವಾಗಿದ್ದು, ಆರಂಭದಲ್ಲೇ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ.
ಮೀಟರ್ ಬಡ್ಡಿ ಹಾವಳಿಗೆ ಊರು ಬಿಟ್ಟ ಕುಟುಂಬ: ಗೃಹ ಮಂತ್ರಿಗಳೇ ಕಡಿವಾಣ ಯಾವಾಗ!?
ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್ ಕಪ್ ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಆರ್ಸಿಬಿ ಈ ಬಾರಿ ಹೇಗಾದರೂ ಮಾಡಿ ಕಪ್ ಜಯಿಸಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಜೆಡ್ಡಾದಲ್ಲಿ ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನು ಕಟ್ಟಿದೆ. 8 ವಿದೇಶಿ ಆಟಗಾರರು ಸೇರಿ ಒಟ್ಟು 22 ಪ್ಲೇಯರ್ಸ್ ಆರ್ಸಿಬಿ ತಂಡದಲ್ಲಿದ್ದಾರೆ. ಆದರೆ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದವರ ಪೈಕಿ ಮೂವರು ಸ್ಟಾರ್ ಆಟಗಾರರು ಇತ್ತೀಚಿನ ಟಿ20 ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದು, ಆರ್ಸಿಬಿಗರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಎಸ್, RCB ಸೇರಿದ ಮೇಲೆ ಏನಾಯ್ತು!? ಸ್ಪಿನ್ ಎದುರು ಪ್ಲಾಫ್ ಶೋ
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಹೈವೋಲ್ಟೆಜ್ ಟಿ20 ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಗೆಲುವು ಟೀಮ್ ಇಂಡಿಯಾದ್ದೆ ಆದರೂ ಆರ್ಸಿಬಿ ಮ್ಯಾನೇಜ್ಮೆಂಟ್, ಫ್ಯಾನ್ಸ್ಗೆ ಮಾತ್ರ ಬೇಸರ ಮೂಡಿಸಿದೆ. ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ಗಳನ್ನ ಖರೀದಿಸಿದ್ವಿ ಅಂತಾ ಬೀಗುತ್ತಿದ್ದ RCB ಪ್ರಾಂಚೈಸಿಗೆ ವಿದೇಶಿ ಆಟಗಾರರು ಶಾಕ್ ಕೊಟ್ಟಿದ್ದಾರೆ.
ಇಂಡೋ-ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಫಸ್ಟ್ ಮ್ಯಾಚೇ ಫ್ಯಾನ್ಸ್ಗೆ ಸಖತ್ ಕಿಕ್ ಕೊಟ್ಟಿದೆ. ಈಡನ್ ಗಾರ್ಡನ್ನಲ್ಲಿ ಟೀಮ್ ಇಂಡಿಯಾದ ಆಲ್ರೌಂಡ್ ಆಟಕ್ಕೆ ಇಂಗ್ಲೆಂಡ್ ತಂಡ ತಬ್ಬಿಬ್ಬಾಗಿ ಹೋಗಿದೆ. ಫಸ್ಟ್ ಹಾಫ್ನಲ್ಲಿ ಆಂಗ್ಲ ಬ್ಯಾಟರ್ಗಳನ್ನ ಇಂಡಿಯನ್ ಬೌಲರ್ಸ್ ಗಿರ್ಗಿಟ್ಲೆ ಆಡಿಸಿದ್ರೆ, ಸೆಕೆಂಡ್ ಹಾಫ್ನಲ್ಲಿ ಇಂಡಿಯನ್ ಬ್ಯಾಟರ್ಸ್ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದರು.
ಫಸ್ಟ್ ಟಿ20 ಫೈಟ್ ಅಂತ್ಯವಾಗಿದ್ದೂ ಆಯ್ತು, ಟೀಮ್ ಇಂಡಿಯಾ ಗೆದ್ದಿದ್ದೂ ಆಯ್ತು. ಆದ್ರೆ, ಸೋತ ಇಂಗ್ಲೆಂಡ್ಗಿಂತ ಹೆಚ್ಚು ಟೆನ್ಶನ್ ಆರ್ಸಿಬಿ ಕ್ಯಾಂಪ್ನಲ್ಲಿ ಸ್ಟಾರ್ಟ್ ಆಗಿದೆ. ಅಭಿಮಾನಿಗಳು ಮ್ಯಾನೇಜ್ಮೆಂಟ್ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಈಡನ್ ಗಾರ್ಡನ್ಸ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳ ವೀಕ್ನೆಸ್ ಅನ್ನ ಮತ್ತೊಮ್ಮೆ ಬಟಾಬಯಲು ಮಾಡಿದೆ. ವಿಶ್ವ ಶ್ರೇಷ್ಠ ತಂಡವಾಗಿದ್ರೂ ಆಂಗ್ಲರ ಆಟ ಭಾರತದಲ್ಲಿ ಅದ್ರಲ್ಲೂ ಸ್ಪಿನ್ನರ್ಗಳ ಎದುರು ನಡೆಯಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಆಂಗ್ಲ ಬ್ಯಾಟ್ಸ್ಮನ್ಗಳ ಆನ್ ಫೀಲ್ಡ್ನ ವೈಫಲ್ಯ ಆರ್ಸಿಬಿಯ ಹರಾಜಿನ ಸ್ಟ್ರಾಟರ್ಜಿ ಮಕಾಡೆ ಮಲಗಿಸಿದೆ.
ಆರ್ಸಿಬಿ ಖರೀದಿಸಿರೋ ಫಿಲ್ ಸಾಲ್ಟ್ ಕಳೆದ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಕೆಕೆಆರ್ ಪರ ರನ್ ಸುನಾಮಿ ಸೃಷ್ಟಿಸಿದ್ರು. ಆದ್ರೆ, ಆ ಸೀಸನ್ನಲ್ಲೂ ಸ್ಪಿನ್ನರ್ಗಳ ಎದುರು ಸಾಲ್ಟ್ ಆಟ ನಡೆದಿರಲಿಲ್ಲ. ಸ್ಪಿನ್ ಎದುರು ಕೇವಲ 27.50 ಸರಾಸರಿಯನ್ನ ಸಾಲ್ಟ್ ಹೊಂದಿದ್ರು.
ಇನ್ನೂ ಮತ್ತೋರ್ವ ಬ್ಯಾಟರ್ ಲಿವಿಂಗ್ಸ್ಟೋನ್ ಕತೆಯೂ ಇದೇ. ಇಂಡಿಯಾದಲ್ಲಿ ಆಡಿದ 30 ಟಿ20 ಇನ್ನಿಂಗ್ಸ್ಗಳಲ್ಲಿ 12 ಬಾರಿ ಸ್ಪಿನ್ ಬಲೆಗೆ ಬಿದ್ದಿದ್ದಾರೆ. ಕೇವಲ 21.83ರ ರನ್ಗಳಿಕೆಯ ಸರಾಸರಿ ಹೊಂದಿದ್ದಾರೆ. ಇನ್ನು, ಯುವ ಆಟಗಾರ ಜೇಕಬ್ ಬೆತೆಲ್ ಇಂಡಿಯನ್ ಕಂಡಿಷನ್ ಹೊಂದಿಕೊಳ್ಳೋಕೆ ಪರದಾಟ ನಡೆಸಿದ್ದಾರೆ.
ಕಳೆದ ಸೀಸನ್ನಲ್ಲಿ ಸಾಮರ್ಥ್ಯ ಪ್ರೂವ್ ಮಾಡಿದ್ದ ಹಲವು ಆಟಗಾರರನ್ನ ಆರ್ಸಿಬಿ ಈ ಬಾರಿ ಆಕ್ಷನ್ನಲ್ಲಿ ಬಿಡ್ತು. ಬಿಗ್ ಪರ್ಸ್ ಇಟ್ಟುಕೊಂಡು ಅಖಾಡಕ್ಕಿಳಿದಿದ್ದ ಆರ್ಸಿಬಿಗೆ ಹಲವು ಇಂಡಿಯನ್ ಸ್ಟಾರ್ಸ್ನ ಖರೀದಿಸೋ ಅವಕಾಶವಿತ್ತು. ಆದ್ರೆ, ಟೀಮ್ ಇಂಡಿಯಾ ಬಿಡಿ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಸಖತ್ ಸೌಂಡ್ ಮಾಡಿದ ಆಟಗಾರರ ಕಡೆಗೂ ಆರ್ಸಿಬಿ ಮುಖ ಮಾಡಲಿಲ್ಲ. ಆದ್ರೆ, ಈ ಇಂಗ್ಲೆಂಡ್ ಆಟಗಾರರ ಹೆಸ್ರು ಬಂದ ಕೂಡಲೇ ಕೋಟಿ ಕೋಟಿ ಹಣವನ್ನ ಸುರಿಯಿತು. ಆಗಲೇ ಫ್ಯಾನ್ಸ್ ಫ್ರಾಂಚೈಸಿ ಮೇಲೆ ರೊಚ್ಚಿಗೆದ್ದಿದ್ರು. ಇದೀಗ ಇಂಗ್ಲೀಷ್ ಸ್ಟಾರ್ಸ್ ಫೇಲ್ ಆದ ಮೇಲೆ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.