ರಾಯಚೂರು: ಹೊಸ ವರ್ಷಾಚರಣೆ ವೇಳೆ ನಗರದ ಪ್ರೌಢ ಶಾಲಾ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಏರ್ ಗನ್, ಬಟನ್ ಚಾಕು, ಪಂಚ್, ಬೆತ್ತ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ವರದಿಯಾಗಿದೆ. ನಗರದ ಜ್ಯೋತಿ ಕಾಲೊನಿಯ ಖಾಸಗಿ ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಶಾಲೆಯ ಗೇಟ್ ಹೊರಗೆ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.
ಓರ್ವ ವಿದ್ಯಾರ್ಥಿ ಕೈ ಬೆರಳಿಗೆ ಗಾಯವಾಗಿವೆ. ಮಕ್ಕಳ ಈ ರೀತಿಯ ಹೊಡೆದಾಟದಿಂದ ಪೋಷಕರು ಆತಂಕಗೊಂಡಿದ್ದಾರೆ. ಹೊರಗಡೆಯ ಹುಡುಗರನ್ನು ಸಹ ಕರೆಯಿಸಿ ವಿದ್ಯಾರ್ಥಿಗಳು ಅಸ್ತ್ರಗಳ ಬಳಕೆಗೆ ಮುಂದಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ನಗರದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಗೆ ಸಂಬಂಧಿಸಿ 7ನೇ ತರಗತಿಯ ಒಬ್ಬ ವಿದ್ಯಾರ್ಥಿಯನ್ನು ಠಾಣೆಗೆ ಕರೆಸಿದ್ದಾರೆ ಎಂಬ ಎಂದು ಹೇಳಲಾಗಿದೆ. ಆದರೆ ಬಾಲಾಪರಾಧ ಪ್ರಕರಣವಾಗಿರುವುದರಿಂದ ಮುಂದಿನ ಕ್ರಮದ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ