ನವದೆಹಲಿ: ಭಾರತದ ಸ್ಟಾರ್ ರೆಸ್ಲರ್ ವಿನೇಶ್ ಫೋಗಟ್ ಭಾರತಕ್ಕೆ ವಾಪಸ್ ಆಗಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಫೋಗಟ್ಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.
ಅಭಿಮಾನಿಗಳನ್ನು ನೋಡಿ ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು.
https://x.com/DeependerSHooda/status/1824703647571198085?ref_src=twsrc%5Etfw%7Ctwcamp%5Etweetembed%7Ctwterm%5E1824703647571198085%7Ctwgr%5Ed8f027ec7ad23cdb638d5d2f841b483cd7a873cf%7Ctwcon%5Es1_&ref_url=https%3A%2F%2Fpublictv.in%2Fparis-olympics-2024-vinesh-phogat-receives-grand-welcome%2F
ವಿನೇಶ್ ಫೋಗಟ್ ಬೆಂಬಲಕ್ಕೆ ಭಾರತದ ಕುಸ್ತಿ ಫೆಡರೇಷನ್ ನಿಲ್ಲಲಿಲ್ಲ ಎಂದು ಫೋಗಟ್ ಪತಿ ಸೋಮ್ವೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ವಜಾಗೊಳಿಸಿಸಿತ್ತು.