ಚಂಡೀಗಢ: ಪ್ಯಾರಿಸ್ ಒಲಿಂಪಿಕ್ಸ್ನಿಂದ ನಾನು ಅನರ್ಹಗೊಂಡ ನಂತರ ಮೋದಿ ಮಾತನಾಡಲು ಮುಂದಾಗಿದ್ದರು. ಆದರೆ ನಾನೇ ಮಾತನಾಡಲು ನಿರಾಕರಿಸಿದ್ದೆ. ಏಕೆಂದರೆ ನಾನು ಮಾತನಾಡಿದ್ದರೇ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎಂದು ವಿನೇಶ್ ಫೋಗಟ್ ಹೇಳಿಕೊಂಡಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿರುವ ವಿನೇಶ್ ಒಲಿಂಪಿಕ್ಸ್ ದಿನಗಳನ್ನು ಮತ್ತೊಮ್ಮೆ ನೆನೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾನು ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡ ನಂತರ ಪ್ರಧಾನಿ ಮೋದಿ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಮುಂದಾಗಿದ್ದರು. ಆದ್ರೆ ನಾನೇ ಮಾತನಾಡಲು ನಿರಾಕರಿಸಿದ್ದೆ ಎಂದಿದ್ದಾರೆ.
Navratri 2024: ನವರಾತ್ರಿಯ 9 ದಿನಗಳು ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಇಲ್ಲಿದೆ ನೋಡಿ!
ಪ್ರಧಾನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಲು ನಿರಾಕರಿಸಿದ್ದೆ. ಏಕೆಂದರೆ ನಾನೂ ಮಾತನಾಡಿದ್ದರೆ, ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಈ ಬಗ್ಗೆ ಮುಂಚೆಯೇ ನನಗೆ ಹೇಳಿದ್ದರು. ಮೋದಿ ಅವರೊಂದಿಗಿನ ಸಂವಾದವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲು ರೆಕಾರ್ಡ್ ಮಾಡಲಾಗುತ್ತದೆ ಎಂದು ಹೇಳಿದ್ದರು. ನನ್ನ ಭಾವನೆಗಳು, ನನ್ನ ಕಠಿಣ ಪರಿಶ್ರಮ, ಸೋಷಿಯಲ್ ಮೀಡಿಯಾದಲ್ಲಿ ಗೇಲಿ ಮಾಡುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಪ್ರಧಾನಿ ಜೊತೆ ಮಾತನಾಡಲು ನಿರಾಕರಿಸಿದೆ. ಪ್ರಚಾರಕ್ಕಾಗಿ ಯಾವುದೇ ಷರತ್ತುಗಳಿಲ್ಲದೇ ಪ್ರಧಾನಿಯೊಂದಿಗಿನ ಸಂಭಾಷಣೆಯನ್ನು ನಾನು ಪ್ರಸಂಶಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಪ್ಯಾರಿಸ್ನಲ್ಲಿ ಪದಕ ಗೆದ್ದ ಎಲ್ಲಾ ಅಥ್ಲಿಟ್ಗಳಿಗೆ ಪ್ರಧಾನಿ ಮೋದಿ ಕರೆ ಮಾಡಿ ಸಂವಾದ ನಡೆಸಿ ಅವರ ಪ್ರಯತ್ನಗಳಿಗಾಗಿ ಅಭಿನಂದಿಸಿದರು. ಅವರಿಗೆ ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ, ಅದನ್ನ ರೆಕಾರ್ಡ್ ಮಾಡದೆಯೇ ಕರೆ ಮಾಡಿ ಅಭಿನಂದನೆ ಸಲ್ಲಿಸಬಹುದಿತ್ತು, ಅದಕ್ಕೆ ನಾನೂ ಕೃತಜ್ಞಳಾಗಿರುತ್ತಿದ್ದೆ. ಅಲ್ಲದೇ ನನ್ನೊಂದಿಗೆ ಮಾತನಾಡಿದ್ರೆ, ಕಳೆದ 2 ವರ್ಷಗಳ ಹಿಂದಿನ ಘಟನೆಯನ್ನು ಕೆದಕುತ್ತಾಳೆ ಅನ್ನೋದು ಅರಿವಿಗೆ ಬಂದಿದೆ ಎಂದು ಕುಟುಕಿದ್ದಾರೆ.