ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ (ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ) ಪೆಟ್ರೋಲ್ 18 ಪೈಸೆಗಳಷ್ಟು ದುಬಾರಿಯಾಗಿದೆ ಮತ್ತು ಪ್ರತಿ ಲೀಟರ್ಗೆ 95.01 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಕೂಡ 18 ಪೈಸೆ ಏರಿಕೆಯಾಗಿದ್ದು,
DRDO CAIR Recruitment: ಎಂಜಿನಿಯರಿಂಗ್ ಮುಗಿಸಿದ್ರೂ ಕೆಲಸ ಸಿಗ್ತಿಲ್ವಾ.? ಇಲ್ಲಿದೆ ನೋಡಿ ಜಾಬ್ ಆಫರ್
ಲೀಟರ್ ಗೆ 88.14 ರೂ.ಗೆ ತಲುಪಿದೆ. ಗಾಜಿಯಾಬಾದ್ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 6 ಪೈಸೆ ಇಳಿಕೆಯಾಗಿ 94.65 ರೂ. ಆಗಿದೆ. ಡೀಸೆಲ್ ಲೀಟರ್ ಗೆ 7 ಪೈಸೆ ಇಳಿಕೆಯಾಗಿ 87.75 ರೂ.ಗೆ ತಲುಪಿದೆ. ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 82 ಪೈಸೆಯಷ್ಟು ಹೆಚ್ಚಾಗಿದೆ ಮತ್ತು ಲೀಟರ್ಗೆ 106.17 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಲೀಟರ್ಗೆ 74 ಪೈಸೆ ಏರಿಕೆಯಾಗಿ 91.52 ರೂ.ಗೆ ಮಾರಾಟವಾಗುತ್ತಿದೆ.
ಕಚ್ಚಾ ತೈಲದ ಬೆಲೆಗಳು ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 75.41 ಡಾಲರ್ಗೆ ಕುಸಿದಿದೆ. WTI ದರವು ಪ್ರತಿ ಬ್ಯಾರೆಲ್ಗೆ 71.25 ಡಾಲರ್ಗೆ ಕುಸಿದಿದೆ.
4 ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು:
– ದೆಹಲಿಯಲ್ಲಿ ಪೆಟ್ರೋಲ್ 96.65 ರೂ ಮತ್ತು ಡೀಸೆಲ್ ಲೀಟರ್ಗೆ 89.82 ರೂ.
– ಮುಂಬೈನಲ್ಲಿ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ ಲೀಟರ್ಗೆ 94.27 ರೂ.
– ಚೆನ್ನೈನಲ್ಲಿ ಪೆಟ್ರೋಲ್ 102.63 ರೂ ಮತ್ತು ಡೀಸೆಲ್ ಲೀಟರ್ಗೆ 94.24 ರೂ.
– ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ ಲೀಟರ್ಗೆ 92.76 ರೂ.
ಹಾಗೇ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 1 ಲೀಟರ್ಗೆ 102.86 ರೂ. ಆಗಿದೆ. ಡೀಸೆಲ್ ಬೆಲೆ ಲೀಟರ್ಗೆ 88.94 ರೂ. ಆಗಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 95.01 ರೂ ಮತ್ತು ಡೀಸೆಲ್ 88.14 ರೂ. ಆಗಿದೆ. ಗಾಜಿಯಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.65 ರೂ ಮತ್ತು ಡೀಸೆಲ್ 87.75 ರೂ ಆಗಿದೆ. ಸಿಕಾರ್ನಲ್ಲಿ ಪೆಟ್ರೋಲ್ ಲೀಟರ್ಗೆ 106.17 ರೂ ಮತ್ತು ಡೀಸೆಲ್ 91.52 ರೂ ಆಗಿದೆ.