ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆಯನ್ನ 3 ರೂ ಡೀಸೆಲ್ ಬೆಲೆಯನ್ನು 3.50 ಪೈಸಾ ಹೆಚ್ಚಿಸಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ. ಇದೇ ವಿಚಾರ ಇದೀಗ ರಾಜಕೀಯ ಸ್ವರೂಪ ಪಡೆದಿದ್ದು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ವೇದಿಕೆಯಾಗಿದೆ. ಬಿಜೆಪಿ ನಾಯಕರು ಬೆಲೆ ಏರಿಕೆಯ ವಿರುದ್ಧ ಸಮರ ಸಾರಿದ್ದು, ಎತ್ತಿನ ಗಾಡಿಯಲ್ಲಿ ವಿಪಕ್ಷ ನಾಯಕ ಅಶೋಕ, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರು ಪ್ರತಿಭಟನೆಗೆ ಬಂದಿದ್ದಾರೆ.
Eid Ul Adha 2024: ತ್ಯಾಗದ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬದ ಮಹತ್ವ ಇಲ್ಲಿದೆ ನೋಡಿ..!
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಫ್ಲೇ ಕಾರ್ಡ್ ಹಿಡಿದು ಬಿಜೆಪಿ ನಾಯಕರು ಆಗಮಿಸಿದರು. ಮಾರಾಟ ಮಾರಾಟ ಕರ್ನಾಟಕ ಮಾರಾಟ, ವಿಧಾನಸೌಧ ಮಾರಾಟ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷನೆ ಕೂಗಿದರು. ಅಯ್ಯಯ್ಯೋ ಅನ್ಯಾಯ ಎಂದು ಬಾಯಿ ಬಡಿದುಕೊಳ್ಳುತ್ತಿದ್ದು, ಬಿಜೆಪಿ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.