ಗದಗ: ಪರಭಾಷಾ ನಾಮಫಲಕಗಳ ವಿರುಧ್ಧ ಸಮರ ಸಾರಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಸೇರಿದಂತೆ ಇತರೆ ಕರವೇ ಹೋರಾಟಗಾರರ ಬಂಧನ ಖಂಡಿಸಿ ಹಾಗೂ ತಕ್ಷಣವೇ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ತಾಲೂಕಾ ಅಧ್ಯಕ್ಷ ನಾಗಪ್ಪ ಅಣ್ಣಿಗೇರಿ ನೇತೃತ್ವದಲ್ಲಿ ಗದಗ ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದ್ರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ನಿಂಗನಗೌಡ ಮಾಲಿ ಪಾಟೀಲ್, ಗದಗ ತಾಲೂಕ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಭೋವಿ, ಗದಗ ತಾಲೂಕಾ ಉಪಾಧ್ಯಕ್ಷ ಈರಣ್ಣ ಹುರಕಡ್ಲಿ, ಗದಗ ತಾಲೂಕ ಸಂಚಾಲಕ ಅಲ್ಲಾ ಸಾಬ್ ನದಾಫ್, ಸಾಮಾಜಿಕ ಜಾಲತಾಣ ಸಂಚಾಲಕ ಮುಸ್ತಾಕ್ ದಾವಣಗೆರೆ ಸೇರಿದಂತೆ ಕರವೇ ಕಾರ್ಯಕರ್ತರಾದ ಪ್ರವೀಣ್ ಬನ್ನಿಗೊಳ್ಳ, ವೀರೇಶ್ ಕೊಣ್ಣೂರ, ಫಾರೂಕ ಕನವಳ್ಳಿ, ಚಂದ್ರು ಮಣ್ಣೂರ, ಮಂಜು ಕೊಣ್ಣೂರ, ಶಿವು, ಜಾಫರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.